ಬೆಂಗಳೂರು: ಧಾರವಾಡದ ನುಗ್ಗಿಕೇರಿ ಶ್ರೀ ಆಂಜನೇಯ ದೇವಸ್ಥಾನದ ಮುಂಭಾಗದ ಕಲ್ಲಂಡಿ ವ್ಯಾಪರಿಗಳ ಮೇಲೆ ಆಕ್ರೋಶ ತೋರಿದ ಹಿಂದೂ ಸಂಘಟನೆ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ್ ಸ್ವಾಮಿ ಕೆಂಡಾಮಂಡಲವಾಗಿದ್ದಾರೆ.
ರಾಮಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಮುಸ್ಲಿಂ ವ್ಯಾಪಾರಿಗಳ ಕಲ್ಲಂಗಡಿಯನ್ನ ನಾಶಪಡಿಸಿದ್ದಾರೆ. ಇದು ಹೇಯ ಮತ್ತು ಪರಮ ಕಿರಾತಕ ಕೃತ ಅಂತಲೂ ಎಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಟ್ವಿಟರ್ ಅಕೌಂಟ್ ನ ಅಧಿಕೃತ ಪೇಜ್ ನಲ್ಲಿಯೇ ಈ ಒಂದು ವಿಚಾರದ ತಮ್ಮ ಒಂದು ವೀಡಿಯೋವನ್ನೂ ಕುಮಾರ್ ಸ್ವಾಮಿ ಪೋಸ್ಟ್ ಮಾಡಿದ್ದಾರೆ.
PublicNext
10/04/2022 10:25 am