ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ಇಷ್ಟಪಡೋ ಖಿಚಡಿ ರೆಡಿ ಮಾಡಿದ ಆಸ್ಟ್ರೇಲಿಯಾ ಪ್ರಧಾನಿ

ಆಸ್ಟ್ರೇಲಿಯಾ ಮತ್ತು ಭಾರತ ಸರ್ಕಾರ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ. ಅದೇ ಖುಷಿಯಲ್ಲಿಯೇ ಈಗ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್, ಪ್ರಧಾನಿ ಮೋದಿ ಇಷ್ಟಪಡೋ ಖಿಚಡಿ ರೆಡಿ ಮಾಡೋ ಮೂಲಕ ಆ ಒಪ್ಪಂದವನ್ನ ಈಗ ಸೆಲೆಬ್ರೇಟ್ ಮಾಡಿದ್ದಾರೆ.

ಹೌದು. ಸ್ಕಾಟ್ ಮಾರಿಸನ್ ಖಿಚಡಿ ಮಾಡಿದ್ದಾರೆ. ಅದರ ಫೋಟೋವನ್ನೂ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಭಾರತ ಸರ್ಕಾರದೊಂದಿಗಿನ ಒಪ್ಪಂದವನ್ನ ಈ ರೀತಿ ಸೆಲೆಬ್ರೇಟ್ ಮಾಡಿರೋದಾಗಿಯೂ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ದೇಶದ ಸಂಬಂಧ ಇನ್ನಷ್ಟು ಗಟ್ಟಿಯಾಗಲಿ ಇಮ್ಮಡಿಗೊಳ್ಳಲಿ ಅಂತಲೂ ಬರೆದುಕೊಂಡಿದ್ದಾರೆ.

Edited By :
PublicNext

PublicNext

10/04/2022 10:17 am

Cinque Terre

40.94 K

Cinque Terre

4

ಸಂಬಂಧಿತ ಸುದ್ದಿ