ನವದೆಹಲಿ: ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾದಂತೆ ಭಾರತದಲ್ಲಿಯೂ ಆರ್ಥಿಕ ಬಿಕ್ಕಟ್ಟು ತಲೆದೋರಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ.
ಆರ್‌ಜೆಡಿ ಮುಖಂಡ ಶರದ್ ಯಾದವ್ ಅವರ ಭೇಟಿ ವೇಳೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, "ಆರ್ಥಿಕ ತಜ್ಞರು ಮತ್ತು ಅಧಿಕಾರಿಗಳು ಇತರ ರಾಷ್ಟ್ರಗಳನ್ನು ನೋಡಿ ಯೋಜನೆ ರೂಪಿಸುತ್ತಾರೆ. ನಾವು ಅವರಂತೆ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಆ ರೀತಿಯಲ್ಲಿ ಮಾಡಬಾರದು. ಮೊದಲು ನಾವು ಯಾರು ಮತ್ತು ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಮನನ ಮಾಡಿಕೊಳ್ಳಬೇಕು" ಎಂದರು.
"ಕಳೆದ 2-3 ವರ್ಷಗಳಿಂದ ಮಾಧ್ಯಮ, ಸಂಸ್ಥೆಗಳು, ಬಿಜೆಪಿ ನಾಯಕರುಗಳು, ಆರ್‌ಎಸ್‌ಎಸ್ ಸತ್ಯವನ್ನು ಮುಚ್ಚಿಟ್ಟಿದ್ದಾರೆ. ನಿಧಾನವಾಗಿ ಸತ್ಯವು ಹೊರಗೆ ಬರುತ್ತದೆ. ಅದು ಶ್ರೀಲಂಕಾದಲ್ಲಿ ನಡೆಯುತ್ತಿದೆ. ಶ್ರೀಲಂಕಾದಲ್ಲಿ ಸತ್ಯವು ಹೊರಬಂದಿದೆ. ಭಾರತದಲ್ಲೂ ಸತ್ಯವು ಹೊರಬರಲಿದೆ'' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
PublicNext
09/04/2022 08:17 pm