ಬೆಂಗಳೂರು: ಜೆಜೆ ನಗರದ ಚಂದ್ರು ಹತ್ಯೆ ಉರ್ದು ಭಾಷೆ ಬಾರದೆ ಇರೋದು ಕೂಡ ಒಂದು ಕಾರಣ. ಗಲಭೆಗೆ ಕಾರಣ ಆಗಲೇಬಾರದು ಎಂಬ ಹಿನ್ನೆಲೆಯಲ್ಲಿ ಪೊಲೀಸರೇ ಗೃಹ ಸಚಿವರಿಂದ ಸುಳ್ಳು ಹೇಳಿಸಿದ್ದಾರೆಂಬುದು ನನ್ನ ಭಾವನೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಬೈಕ್ ಅಪಘಾತದಲ್ಲಿ ಯಾರಂದ್ರೆ ಯಾರಿಗೂ ಪೆಟ್ಟಾಗಿಲ್ಲ. ಗಾಡಿಯಂತೂ ಡ್ಯಾಮೇಜ್ ಆಗಿಯೇ ಇಲ್ಲ. ಭಾಷೆ ಬಾರದೆ ಇರೋದು ಕೂಡ ಇದಕ್ಕೆ ಒಂದು ಕಾರಣ. ಇದನ್ನ ಚಂದ್ರು ತಾಯಿ ಕೂಡ ಹೇಳಿದ್ದಾರೆ ಎಂದು ಸಿ.ಟಿ ರವಿ ವಿವರಿಸಿದ್ದಾರೆ.
ಗೃಹ ಸಚಿವರ ಹೇಳಿಕೆಯನ್ನ ನಾನು ಕಾಮೆಂಟ್ ಮಾಡೋದಿಲ್ಲ. ಆದರೆ, ಕೆಲವೊಮ್ಮೆ ಮುಂದೆ ಗಲಾಟೆ ಆಗಲೇಬಾರದು ಎಂದು ಈ ರೀತಿ ಹೇಳಲಾಗುತ್ತದೆ. ಪೊಲೀಸರೇ ಸಚಿವರಿಂದ ಈ ರೀತಿ ಹೇಳಿಸಿರುತ್ತಾರೆ ಎಂಬುದೇ ನನ್ನ ಭಾವನೆ ಅಂತಲೇ ಸಿ.ಟಿ.ರವಿ ಹೇಳಿಕೊಂಡಿದ್ದಾರೆ.
PublicNext
08/04/2022 07:23 am