ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸದ್ಯಕ್ಕಿಲ್ಲ ಸಚಿವ ಸಂಪುಟ ವಿಸ್ತರಣೆ- ಸಚಿವಾಕಾಂಕ್ಷಿಗಳಿಗೆ ಭಾರಿ ನಿರಾಸೆ

ಬೆಂಗಳೂರು: ಈಗ ಸಿಗುತ್ತೆ ಇನ್ನು ಸ್ವಲ್ಪ ದಿನದಲ್ಲಿ ಸಿಕ್ಕಿಬಿಡುತ್ತೆ ಎಂದು ಮಂತ್ರಿ ಸ್ಥಾನಕ್ಕೆ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದ ಸಚಿವಾಕಾಂಕ್ಷಿಗಳಿಗೆ ಬಿಜೆಪಿ ಹೈಕಮಾಂಡ್ ತೀವ್ರ ನಿರಾಸೆಯನ್ನು ಉಂಟುಮಾಡಿದೆ.

ಸಿಎಂ ಬೊಮ್ಮಾಯಿ ದೆಹಲಿಯಲ್ಲಿ ಎರಡೆರಡು ಬಾರಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನ ಭೇಟಿಯಾದ್ರೂ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಅಷ್ಟೊಂದು ಆಸಕ್ತಿ ಅವರು ತೋರಿದಂತೆ ಕಾಣಿಸುತ್ತಿಲ್ಲಾ. ಅಮಿತ್ ಶಾ ಅವರನ್ನಂತೂ ಭೇಟಿಯಾಗಲು ಸಿಎಂ ಅವರಿಗೆ ಸಾಧ್ಯವೇ ಆಗಲಿಲ್ಲ. ಹಾಗಾಗಿ‌ ಸಿಎಂ ಅವರು ಅವರ ಅಧಿಕೃತ ಕಾರ್ಯಕ್ರಮಗಳ ಪಟ್ಟಿಯಲ್ಲಿದ್ದ ಕೇಂದ್ರ ಸಚಿವರುಗಳನ್ನ ಭೇಟಿಯಾಗಿ ಚರ್ಚಿಸಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾರೆ.

ಕಾರ್ಯಕಾರಿಣಿ ಸಭೆ ಬಳಿಕವಷ್ಟೇ ಸಚಿವ ಸಂಪುಟ ವಿಸ್ತರಣೆ ವಿಚಾರ ಸಿಎಂ ಬೊಮ್ಮಾಯಿಯವರು ದೆಹಲಿಗೆ ಹೊರಟುನಿಂತಾಗಲೇ ರಾಜ್ಯದ ರಾಜಕೀಯದಲ್ಲಿ ಕಲರವ ಶುರುವಾಗಿಹೋಗಿತ್ತು. ಅದರಲ್ಲೂ ಅನೇಕ ಹಿರಿಯ ಸಚಿವರುಗಳನ್ನು ಸಂಪುಟದಿಂದ ಕೈಬಿಡುತ್ತಾರೆ. ಅವರ ಬದಲಿಗೆ ಹೊಸಮುಖಗಳಿಗೆ, ಆಕಾಂಕ್ಷಿಗಳಿಗೆ ಅವಕಾಶ ಕೊಡಲಾಗುತ್ತದೆ ಎಂಬ ಚರ್ಚೆ ಜೋರಾಗಿ ಶುರುವಾಗಿತ್ತು.

ಅನೇಕ ಹಿರಿಯ ಸಚಿವರಲ್ಲಿ ಆತಂಕವೂ ಶುರುವಾಗಿತ್ತು.‌ ಆಕಾಂಕ್ಷಿಗಳನೇಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದರು. ಆದರೆ ಹೈಕಮಾಂಡ್ ಮಾತ್ರ ಸದ್ಯಕ್ಕೆ ಏನೂ ಬೇಡ ಇದೇ ತಿಂಗಳು 16 ನೇ ತಾರೀಕು ಹೊಸಪೇಟೆಯಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿ ಸಭೆ ಬಳಿಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ತೆಗೆದುಕೊಳ್ಳೋಣ ಅಂತ ಹೇಳಿರುವುದರಿಂದ ಕೆಲವರ ಆತಂಕ ಸದ್ಯದ ಮಟ್ಟಿಗೆ ಕಡಿಮೆ ಆಗಿದೆ. ಒಂದಿಷ್ಟು ಜನರ ಆಸೆಗೆ ತಣ್ಣಿರೆರೆಚಿದಂತೆ ಆಗಿದೆ.

Edited By : Shivu K
PublicNext

PublicNext

07/04/2022 09:49 am

Cinque Terre

55.17 K

Cinque Terre

0