ಬಾಗಲಕೋಟೆ : ಹಿಜಾಬ್ ಬೇಕು ಬೇಡಗಳ ಸಂದರ್ಭದಲ್ಲಿ ಮಂಡ್ಯದ ಯುವತಿ ಮುಸ್ಕಾನ್ 'ಅಲ್ಲಾಹು ಅಕ್ಬರ್' ಎಂದು ಹೇಳಿ ಸುದ್ದಿಯಾಗಿದ್ದಳು.
ಸದ್ಯ ಮುಸ್ಕಾನ ಮತ್ತೆ ಮುನ್ನೆಲೆಗೆ ಬಂದಿದ್ದಾಳೆ. ಹೌದು ಅಲ್ ಕೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಅಯ್ಮನ್ ಅಲ್ ಜವಾಹಿರಿ ಕೂಡ ಮಾತನಾಡಿದ್ದಾನೆ.
ಮುಸ್ಕಾನ ಮುಸ್ಲಿಂಮರ ಹೆಮ್ಮೆ ಎಂದು ಹಾಡಿ ಹೋಗಳಿದ್ದಾರೆ. ಇನ್ನು ಅಲ್ ಜವಾಹಿರ ನೀಡಿದ ಹೇಳಿಕೆ ವಿಡಿಯೋ ಭಾರೀ ಸಂಚಲ ಸೃಷ್ಠಿಸಿದೆ.
ಸದ್ಯ ಇದೇ ವಿಚಾರವಾಗಿ ಮಾತನಾಡಿದ ವಿರೋಧ ಪಕ್ಷನ ನಾಯಕ ಸಿದ್ದರಾಮಯ್ಯ ಇದನ್ನೆಲ್ಲ ಬಿಜೆಪಿಗರೇ ಹುಟ್ಟಾಕಿರೋದು. ಆರ್ ಎಸ್ ಎಸ್ ನವರೇ ಇಂತಹದನ್ನು ಮಾಡೋದು. ಸಮಾಜದಲ್ಲಿ ಅಶಾಂತಿ ಉಂಟುಮಾಡಲಿಕ್ಕೆ,ಮತಗಿಟ್ಟಿಸಿಕೊಳ್ಳು ಹೀಗೆ ಏನೆನೋ ಹುಟ್ಟುಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಅಲೂರ ಎಸ್.ಕೆ.ಗ್ರಾಮದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು ಬಿಜೆಪಿ ಮತ್ತು ಆರ್ ಎಸ್ ಎಸ್ ನವರು ಬೇಕಂತೆ ರಾಜ್ಯದಲ್ಲಿ ವಿವಿಧ ಗಲಭೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಈಗಾ ಮುಸ್ಕಾನ್ ಕುರಿತು ಅಲ್ ಜವಾಹಿರ ನೀಡಿದ ಹೇಳಿಕೆಯನ್ನು ಇವರೇ ಸೃಷ್ಠಿಸಿದ್ದು ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಚಂದ್ರು ಹತ್ಯೆ ಪ್ರಕರಣ ಸಂಬಂಧಿಸಿದಂತೆ ಸಿಎಂ ಅವರು ನನಗೆ ಮಾಹಿತಿ ಇಲ್ಲ ಎಂದು ಹೇಳುತ್ತಾರೆ. ಇವರ ಹತ್ತಿರ ಇಂಟಿಲಿಜನ್ಸಿ ಇಲ್ಲವೇನ್ರಿ, ಬೆಳಿಗ್ಗೆ ಸಾಯಂಕಾಲ ಇವರಿಗೆ ಇಂಟಲಿಜನ್ಸಿ ಮಾಹಿತಿ ನೀಡೋದಿಲ್ವಾ, ಇಂಟಲಿಜೆನ್ಸಿ ಇದ್ರು ಮಾಹಿತಿ ಇಲ್ಲಾ ಅಂದ್ರೆ ಏನು ಹೇಳಬೇಕು. ನೋಡಿ, ಯಾರೇ ತಪ್ಪು ಮಾಡಿದ್ರೂ ಶಿಕ್ಷೆಯಾಗಬೇಕು. ನಾನು ಮಾಡಲಿ, ನೀವು ಮಾಡಲಿ, ಯಾವ ಧಮ೯ದವರೇ ಮಾಡಲಿ ಶಿಕ್ಷೆಯಾಗಬೇಕು.
ನಾನು ಯಾವ ಧಮ೯ದ ಪರನೂ ಮಾತನಾಡೋದಿಲ್ಲ. ಯಾರ ಮಾಡಿದ್ರೂ ಶಿಕ್ಷೆಯಾಗಬೇಕು ಎಂದರು.
PublicNext
06/04/2022 06:46 pm