ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ದೇಶದ ಒಂದಿಂಚು ಭೂಮಿಯನ್ನೂ ಅನ್ಯ ದೇಶಗಳಿಗೆ ಬಿಟ್ಟುಕೊಟ್ಟಿಲ್ಲ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಹೇಳಿದ್ದಾರೆ.
'ಕೇಂದ್ರ ಸರ್ಕಾರವು ಭಾರತದ ಭೂಭಾಗವನ್ನು ಚೀನಾ ದೇಶಕ್ಕೆ ಸ್ವಲ್ಪ ಮಟ್ಟಿಗೆ ಬಿಟ್ಟುಕೊಟ್ಟಿದೆ' ಎಂದು ಆರೋಪಿಸಿದ ಜಾನ್‌ಪುರದ ಬಿಎಸ್‌ಪಿ ಸಂಸದ ಶ್ಯಾಮ್ ಸಿಂಗ್ ಯಾದವ್ ವಿರುದ್ಧ ಮಂಗಳವಾರ ಲೋಕಸಭೆಯಲ್ಲಿ ವಾಗ್ದಾಳಿ ನಡೆಸಿದ ಅವರು, ನಾವು ಒಂದಿಂಚು ಭೂಮಿಯನ್ನೂ ಬಿಟ್ಟು ಕೊಟ್ಟಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಗಡಿ ರಾಜ್ಯವಾಗಿರುವ ಅರುಣಾಚಲ ಪ್ರದೇಶವೂ ಶೇ. 100 ರಷ್ಟು ಸುರಕ್ಷಿತವಾಗಿದೆ ಎಂದ ಅವರು ನಾನು ಅರುಣಾಚಲ ಪ್ರದೇಶದಿಂದ ಬಂದಿದ್ದೇನೆ. ಟಿವಿ ವಾಹಿನಿಯೊಂದು ಇಲ್ಲ ಸಲ್ಲದ ವಿಚಾರ ಹೇಳಿದೆ. ಮತ್ತು ವಿದೇಶಿ ವೆಬ್‌ಸೈಟ್‌ನಿಂದ ಚಿತ್ರಗಳನ್ನು ತೆಗೆದುಕೊಂಡ ಅದು, ಅರುಣಾಚಲದೊಳಗೆ ಚೀನಾ ಒಂದು ಹಳ್ಳಿಯನ್ನು ಸ್ಥಾಪಿಸಿದೆ ಎಂದು ಹೇಳಿದೆ. ಆದರೆ 1959 ರಲ್ಲಿ ಆ ಗ್ರಾಮವನ್ನು ಚೀನಾ ಆಕ್ರಮಿಸಿಕೊಂಡಿದೆ” ಎಂದು ರಿಜಿಜು ಹೇಳಿದರು. ಅಲ್ಲದೇ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ದೇಶವನ್ನು ದಾರಿ ತಪ್ಪಿಸಬಾರದು ಎಂದು ತಿರುಗೇಟು ನೀಡಿದ್ದಾರೆ.
PublicNext
06/04/2022 07:28 am