ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಸಚಿವ ಬಿ.ಸಿ.ಪಾಟೀಲ ನೇತೃತ್ವದಲ್ಲಿ ಸೋಮೇಶ್ವರ ದೇವಾಲಯದ ಮಹಾದ್ವಾರ ಉದ್ಘಾಟನೆ

ಗದಗ: ಶಿರಹಟ್ಟಿ ಮತಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ ತಮ್ಮ ಸ್ವಂತ ಅನುದಾನದಲ್ಲಿ ತಮ್ಮ ತಂದೆ ತಾಯಿಯ ಸ್ಮರಣಾರ್ಥವಾಗಿ ನಿರ್ಮಾಣ ಮಾಡಿದ ಲಕ್ಷ್ಮೇಶ್ವರ ಪಟ್ಟಣದ ಶ್ರೀ ಸೋಮೆಶ್ವರ ದೇವಾಲಯದ ಮಹಾದ್ವಾರ ಲೋಕಾರ್ಪಣೆ ಕಾರ್ಯಕ್ರಮವು ಅದ್ಧೂರಿಯಾಗಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್, ಶಾಸಕ ರಾಮಣ್ಣ ಲಮಾಣಿ ನೆರವೇರಿಸಿದರು.

ಪಟ್ಟಣದಲ್ಲಿ ಕುಂಬಮೇಳದ ಮೆರವಣಿಗೆ ಮೂಲಕ ಗಣ್ಯರನ್ನು ಸ್ವಾಗತಿಸಲಾಯಿತು. ಬಳಿಕ ಸಚಿವರು ಮತ್ತು ಶಾಸಕರು ಮಹಾದ್ವಾರ ಲೋಕಾರ್ಪಣೆ ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ಲಕ್ಷ್ಮೇಶ್ವರ ತಾಲೂಕು ಎಂದರೆ ಧಾರ್ಮಿಕತೆಗೆ ಹೆಸರುವಾಸಿ ರಾಮಣ್ಣ ಲಮಾಣಿ ಅವರು ತಮ್ಮ ಸ್ವಂತ ಕರ್ಚಿನಲ್ಲಿ ಉತ್ತಮ ಧಾರ್ಮಿಕ ಕೆಲಸ ಮಾಡಿರುವುದು ಸಂತೋಷವಾಗಿದೆ.

ಲಕ್ಷ್ಮೇಶ್ವರವು ಗದಗ ಜಿಲ್ಲೆಯಲ್ಲಿ ತುಂಬಾ ವೇಗವಾಗಿ ಅಭಿವೃದ್ಧಿ ಕಾಣುತ್ತಿದೆ ಎಂದರೆ ಅದಕ್ಕೆ ಶಾಸಕ ರಾಮಣ್ಣ ಲಮಾಣಿ ಕಾರಣ ಅವರ ಮುಂದಿನ ರಾಜಕೀನ ಜೀವನಕ್ಕೆ ಸೋಮೆಶ್ವರ ದೇವರ ಮತ್ತು ಜನರ ಆಶೀರ್ವಾದ ಇರಲಿ ಎಂದರಲ್ಲದೇ, ದೇಶದಲ್ಲಿ ಅನ್ನ ಕೊಡಲು ಸಾಧ್ಯವೆಂದರೆ ಅದು ರೈತರಿಂದ ಮಾತ್ರ ಸಾಧ್ಯ. ಯಾವುದೇ ಸಿರಿವಂತರಿಂದಲೂ ಅನ್ನ ನೀಡಲು ಸಾಧ್ಯವಿಲ್ಲ. ಅನ್ನ ನೀಡಲು ಅನ್ನದಾತನೇ ಬೇಕು. ಅನ್ನದಾತನೇ ನಮ್ಮದೈವ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತರನ್ನು ಕೊಂಡಾಡಿದರು.

ರೈತರಿಗಾಗಿ ನಾನು ಹಲವಾರು ರೈತಪರ ಯೋಜನೆಯನ್ನು ತರುತ್ತಿದ್ದೇನೆ ರೈತರ ಮಕ್ಕಳಿಗಾಗಿ ಯೋಜನೆಯನ್ನು ತಂದಿದ್ದೆನೆ ಎಂದರು.

ನಂತರ ಮಾತನಾಡಿದ ಶಾಸಕ ರಾಮಣ್ಣ ಲಮಾಣಿ ಕ್ಷೇತ್ರದಲ್ಲಿ ಹಾಗೂ ಲಕ್ಷ್ಮೇಶ್ವರ ಪಟ್ಟಣದಲ್ಲಿ ತಮ್ಮ ಸ್ವಂತ ಕರ್ಚಿನಲ್ಲಿ ಉತ್ತಮ ಕೆಲಸ ಮಾಡಿರುವ ಬಗ್ಗೆ ತಿಳಿಸಿ ಸರಕಾರದ ಯೋಜನೆಗಳಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುತ್ತಿದ್ದೆನೆ ಎಂದರು.

Edited By :
PublicNext

PublicNext

05/04/2022 09:16 pm

Cinque Terre

50.7 K

Cinque Terre

0