ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಜಾನ್‌ನಿಂದ ಯಾರಿಗೆ ಏನು ತೊಂದರೆ ಆಗಿದೆ?: ಸಿದ್ದರಾಮಯ್ಯ ಪ್ರಶ್ನೆ

ಹಿರಿಯೂರು: ಬಂಡವಾಳ ಹೂಡಿಕೆದಾರರು ಎರಡು ವರ್ಷಗಳಿಂದ ಹೂಡಿಕೆ ಮಾಡಲು ರಾಜ್ಯಕ್ಕೆ ಬಂದಿಲ್ಲ. ಹೀಗಾಗಿ ನಮ್ಮಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ‌. ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿಫಲರಾಗಿದ್ದಾರೆ‌ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮದಲ್ಲಿರಿಸಿ ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ‌. ಸದ್ಯ ಆಜಾನ್ ವಿವಾದವನ್ನು ಸೃಷ್ಟಿಸಲಾಗಿದೆ. ಮಸೀದಿಗಳಲ್ಲಿ ನಿನ್ನೆ ಮೊನ್ನೆಯಿ‌ದ ಅಜಾನ್ ಮಾಡುತ್ತಿಲ್ಲ‌. ಬಹುಹಿಂದಿನಿಂದಲೂ ಅದು ಮಸೀದಿಗಳಲ್ಲಿ ನಡೆದೇ ಇದೆ‌. ದೇವಸ್ಥಾನಗಳಲ್ಲೂ ಧ್ವನಿವರ್ದಕಗಳನ್ನು ಬಳಸುತ್ತಾರೆ. ಸದ್ಯ ಧ್ವನಿವರ್ದಕ ಬಳಕೆಯಿಂದ ಯಾರಿಗೆ ಏನು ತೊಂದರೆ ಆಗಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬಿಜೆಪಿಯವರು ಇಂತಹ ಅನೇಕ ಭಾವನಾತ್ಮಕ ವಿಚಾರಗಳನ್ನೇ ಮುನ್ನೆಲೆಗೆ ತಂದು ರಾಜಕೀಯ ಮಾಡ್ತಿದ್ದಾರೆ. ಬೆಲೆ ಏರಿಕೆಯಿಂದ ಜನ ತತ್ತರಿಸೊರುವಾಗ ಹಿಜಾಬ್, ಜಾತ್ರೆ ವ್ಯಾಪಾರ, ಭಗವದ್ಗೀತೆ, ಹಲಾಲ್, ಅಜಾನ್ ಎಂಬ ವಿವಾದಗಳನ್ನು ಹುಟ್ಟು ಹಾಕಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

Edited By : Nagaraj Tulugeri
PublicNext

PublicNext

05/04/2022 04:53 pm

Cinque Terre

37.68 K

Cinque Terre

14

ಸಂಬಂಧಿತ ಸುದ್ದಿ