ಬೆಂಗಳೂರು: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ವೇಳೆ ಹಿಜಾಬ್ ಧರಿಸಿ ಪರೀಕ್ಷಾ ಕರ್ತವ್ಯ ನಿರ್ವಹಿಸಲು ಯಾವುದೇ ಶಾಲಾ-ಕಾಲೇಜು ಶಿಕ್ಷಕರಿಗೆ ಅವಕಾಶವಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ. ಸರ್ಕಾರಿ ನೌಕರರಿಗೆ ಯಾವುದೇ ವಸ್ತ್ರ ಸಂಹಿತೆ ಇಲ್ಲ. ಹಾಗೂ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಕೊಠಡಿಯೊಳಗೆ ಹಿಜಾಬ್ ಹಾಕಲು ಅವಕಾಶವಿಲ್ಲ ಎಂದಿದ್ದಾರೆ.
ನೈತಿಕ ದೃಷ್ಟಿಯಿಂದ ಶಿಕ್ಷಕರು ಕೂಡ ಹಿಜಾಬ್ ಧರಿಸಬಾರದು. ಹಾಗಂತ ನಾವೇನೂ ಶಿಕ್ಷಕರನ್ನು ಹಿಜಾಬ್ ಧರಿಸಬೇಡಿ ಎಂದು ಒತ್ತಾಯಿಸುವುದಿಲ್ಲ. ಒಂದು ವೇಳೆ ಅವರು ಧರಿಸುವುದಾದ್ರೆ, ನಾವು ಅವರನ್ನು ಪರೀಕ್ಷಾ ಕೆಲಸದಿಂದ ವಿಮುಕ್ತಿಗೊಳಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಹೇಳಿದ್ದಾರೆ. ಇದೀಗ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಪ್ರಾರಂಭವಾಗಿದ್ದು ಏಪ್ರಿಲ್ ಮಧ್ಯದವರೆಗೆ ಮುಂದುವರೆಯುತ್ತದೆ. ಮತ್ತೊಂದೆಡೆ, ಈ ತಿಂಗಳ ಕೊನೆಯಲ್ಲಿ ಪಿಯು ಪರೀಕ್ಷೆಗಳು ಸಹ ಶುರುವಾಗಲಿವೆ.
PublicNext
05/04/2022 10:14 am