ಚಿಕ್ಕೋಡಿ: ಹಲಾಲ್ ಕಟ್ ನಿಷೇಧ ಮಾಡಲೇಬೇಕು.ಹಿಂದೂ ಸಂಘಟನೆಗಳು ಮಾಡ್ತಿರೋದು ಸರಿ ಇದೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ನಿಪ್ಪಾಣಿಯಲ್ಲಿ ಹೇಳಿದ್ದಾರೆ.
ಹಲಾಲ್ ಕಟ್ ಅನ್ನೋದು ಮುಸ್ಲಿಂ ದೇವರಿಗೆ ಅರ್ಪಣೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳು ಮಾಡ್ತಿರೋದು ಸರಿ ಇದೆ ಅನಿಸುತ್ತದೆ. ಅವರ ಪರವಾಗಿಯೇ ನಾವು ಇರುತ್ತೇವೆ ಅಂತಲೇ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಹಿಂದೂಪರ ಸಂಘಟನೆಗಳು ಹೇಳ್ತಿರೋ ಜಟ್ಕಾ ಕಟ್ ಜಾರಿಗೆ ತರಬೇಕು ಅನ್ನೋದನ್ನ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಪಾದಿಸಿದ್ದಾರೆ.
PublicNext
02/04/2022 04:40 pm