ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರಾಠಿ ನೃತ್ಯಕ್ಕೆ ಅವಕಾಶ ನೀಡಿದ್ದು ಕಸಾಪ ಇತಿಹಾಸದಲ್ಲಿ ಕಪ್ಪು ಚುಕ್ಕೆ: ಮಹೇಶ್ ಜೋಶಿ

ಬೆಂಗಳೂರು: ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ಹಾಡಿನ ನೃತ್ಯಕ್ಕೆ ಅವಕಾಶ ನೀಡಿದ್ದು ಕನ್ನಡ ಸಾಹಿತ್ಯ ಪರಿಷತ್ ಇತಿಹಾಸದಲ್ಲಿ ಕಪ್ಪು ಚುಕ್ಕೆ ಎಂದು ಕಸಾಪ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ ಹೇಳಿದ್ದಾರೆ.

ಮರಾಠಿ ನೃತ್ಯ ಆಯೋಜಿಸಿದ್ದನ್ನು ಖಂಡಿಸಿ ವಿಜಯಪುರ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ್ ವಾಲೀಕಾರ ಅವರಿಗೆ ಪತ್ರ ಬರೆದಿರುವ ಅವರು, ಸದಾ‌ ಕನ್ನಡಿಗರನ್ನು ಕೆಣಕುವ ಮರಾಠಿಗರು ಬೆಳಗಾವಿಯ ಗಡಿಯಲ್ಲಿ ಸಲ್ಲದ ದಾಂಧಲೆ ಎಬ್ಬಿಸುತ್ತಿದ್ದಾರೆ. ಮರಾಠಿ ನೃತ್ಯ ಆಯೋಜಿಸಿದ್ದಕ್ಕೆ ತಾವು ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕು. 'ಪರಿಷತ್ತಿನ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವಂಥ ಯಾವುದೇ ಕೆಲಸ ಮತ್ತೊಮ್ಮೆ‌.ಮರುಕಳಿಸಿದ್ದಲ್ಲಿ ಪರಿಷತ್ತಿನ ನಿಬಂಧನೆಗಳ ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮಹೇಶ್ ಜೋಶಿ ಎ‍ಚರಿಸಿದ್ದಾರೆ.

Edited By : Nagaraj Tulugeri
PublicNext

PublicNext

02/04/2022 03:45 pm

Cinque Terre

69.96 K

Cinque Terre

5

ಸಂಬಂಧಿತ ಸುದ್ದಿ