ಬೆಂಗಳೂರು: ರಾಜ್ಯದ ಪ್ರವಾಸದಲ್ಲಿರೋ ರಾಹುಲ್ ಗಾಂಧಿ ತಮ್ಮ ಕಾಂಗ್ರೆಸ್ ನಾಯಕರಿಗೆ ಈಗೊಂದು ಟಾಸ್ಕ್ ಕೊಟ್ಟಿದ್ದಾರೆ. ಈ ಟಾಸ್ಕ್ ಏನಪ್ಪ ಅಂದ್ರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 150 ಸ್ಥಾನ ಬರಲೇಬೇಕು. ಅದಕ್ಕಿಂತಲೂ ಒಂದೇ ಒಂದು ಸ್ಥಾನ ಕಡಿಮೆ ಬರಲೇಬಾರದು ಎಂದು ಕೊಂಚ ಖಡಕ್ ಆಗಿಯೇ ಹೇಳಿದ್ದಾರೆ.
ಹೌದು.ರಾಹುಲ್ ಗಾಂಧಿ ಈ ಸಲ ತುಂಬಾನೇ ಸೀರಿಯೆಸ್ ಆದಂಗಿದೆ. ರಾಜ್ಯದಲ್ಲಿ ನಡೆಯೋ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲೇಬೇಕು ಅನ್ನೋ ಪಣತೊಟ್ಟಂಗಿದೆ. ಅದಕ್ಕೇನೆ ತಮ್ಮ ಪಕ್ಷದ ನಾಯಕರಿಗೆ ತಮ್ಮದೇ ರೀತಿಯಲ್ಲಿ ಒತ್ತಡ ಹಾಕುತ್ತಿದ್ದಾರೆ.
ಕರ್ನಾಟಕ ಸ್ಪಿರಿಟ್ ಆಫ್ ಕಾಂಗ್ರೆಸ್ ಪಾರ್ಟಿ. ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಆದರೆ ಈ ಸರ್ಕಾರ ಹಣದ ಮೇಲೆನೆ ಅಧಿಕಾರಕ್ಕೆ ಬಂದಿದೆ ಎಂದು ಕೂಡ ರಾಹುಲ್ ದೂರಿದ್ದಾರೆ.
PublicNext
02/04/2022 12:53 pm