ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅ‍ಚ್ಛೇ ದಿನ, 15 ಲಕ್ಷ ಇವೆಲ್ಲ ಏಪ್ರಿಲ್ ಫೂಲ್ ತಮಾಷೆ: ಸಂಜತ್ ರಾವುತ್

ಮುಂಬೈ: 'ಅಚ್ಛೇ ದಿನ ಹಾಗೂ 15 ಲಕ್ಷ ಹಣ ಇವೆಲ್ಲ ಏಪ್ರಿಲ್ ಫೂಲ್ ತಮಾಷೆ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಕೇಂದ್ರ ಸರ್ಕಾರದ ಬಗ್ಗೆ ಲೇವಡಿ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತೀಯರಿಗೆ ಅಚ್ಛೇ ದಿನ ಬರುವುದು, ದೇಶವಾಸಿಗಳ ಖಾತೆಗೆ 15 ಲಕ್ಷ ಹಣ ಬರುವುದು, ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದಲ್ಲಿ ಏಕೀಕರಿಸುವ ಹಾಗೂ ಉದ್ಯೋಗಳನ್ನು ನೀಡುವುದು. ಇವೆಲ್ಲ ಏಪ್ರಿಲ್ ಫೂಲ್ ತಮಾಷೆ ಅಷ್ಟೇ ಹೊರತು ಬೇರೇನೂ ಅಲ್ಲ ಎಂದು ಹೇಳಿದ್ದಾರೆ‌.

ಸರಕಾರ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಹಾಗೂ ಕೂಡಲೇ ಜನಕಲ್ಯಾಣ ಯೋಜನೆಗಳನ್ನು ಆರಂಭಿಸಬೇಕು. ಸಾಮಾನ್ಯರ ಪಾಲಿಗೆ ದೇಶದಲ್ಲಿ ಜೀವನ್ಮರಣ ಸ್ಥಿತಿ ಬಂದಿದೆ. ನಾವು ಸೇಡಿನ ರಾಜಕಾರಣ ಮಾಡೋದಿಲ್ಲ ಎಂದು ಹೇಳುತ್ತ ಬಂದಿರುವುದು ಕೂಡ ಏಪ್ರಿಲ್ ಫೂಲ್ ತಮಾಷೆ ಎಂದು ಸಂಜಯ್ ರಾವುತ್ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

01/04/2022 08:03 pm

Cinque Terre

28.12 K

Cinque Terre

10

ಸಂಬಂಧಿತ ಸುದ್ದಿ