ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆ ಸಂಚು ನಡೆದಿರುವುದು ಬಯಲಾಗಿದೆ.
ಪ್ರಧಾನಿ ಮೋದಿ ಅವರಿಗೆ ಪ್ರಾಣಭಯ ಒಡ್ಡಿರುವ ಸಂದೇಶ ಸಿಕ್ಕಿದ್ದು, ಭದ್ರತಾ ಪಡೆಗಳು ಇದರ ತನಿಖೆಯಲ್ಲಿ ತೊಡಗಿವೆ. 20 ಕೆಜಿ ಆರ್‌ಡಿಎಕ್ಸ್‌ನೊಂದಿಗೆ ಸ್ಲೀಪರ್ ಸೆಲ್ ಮೂಲಕ ಪ್ರಧಾನಿಯನ್ನು ಕೊಲ್ಲಲು ಸಂಚು ರೂಪಿಸಲಾಗಿದೆ ಅಂತ ಎಚ್ಚರಿಕೆಯ ಇ-ಮೇಲ್ ಒಂದು ಬಂದಿದೆ ಎಂದು ಸೆಕ್ಯೂರಿಟಿ ಏಜೆನ್ಸಿ ಮಾಹಿತಿ ನೀಡಿದೆ.
ಇಮೇಲ್‌ನಲ್ಲಿ ಏನಿದೆ?:
ಹಲೋ ಎಲ್ಲರೂ ಇಲ್ಲಿ ಕೇಳಿ.. ನನ್ನ ಬಳಿ 20ಕ್ಕೂ ಹೆಚ್ಚು ಆರ್ಡಿಎಕ್ಸ್ಗಳು ಇವೆ. 20 ಕಡೆಗಳಲ್ಲಿ ದೊಡ್ಡ ಮಟ್ಟದಲ್ಲಿ ಅಟ್ಯಾಕ್ ಮಾಡಲು ಪ್ಲಾನ್ ರೂಪಿಸಿದ್ದೇನೆ. ಅದೂ ಕೂಡ ಪ್ರಮುಖ ನಗರಗಳಲ್ಲಿ. ನಾನು ಪ್ರಧಾನಿ ಮೋದಿಯನ್ನ ಕೊಲ್ಲಲು ನಿಶ್ಚಯಿಸಿದ್ದೇನೆ. ನಾನು ಅದನ್ನ ಮಾಡುತ್ತೇನೆ. ಮೋದಿ ನನ್ನ ಜೀವನವನ್ನ ಹಾಳು ಮಾಡಿದ್ದಾರೆ. ನಾನು ಯಾರನ್ನೂ ಬಿಡುವುದಿಲ್ಲ.
ನಾನು ಸರಿಸುಮಾರು 2 ಲಕ್ಷ ಮಂದಿಯನ್ನ ಕೊಲ್ಲುತ್ತೇನೆ. ನನ್ನ ಬಾಂಬ್ನಿಂದ ಜನರು ಸತ್ತರೆ ಅವರೂ ಕೂಡ ಸಾಯುತ್ತಾರೆ. ನಾನು ಈಗಾಗಲೇ ಕೆಲವು ಉಗ್ರರನ್ನ ಭೇಟಿ ಮಾಡಿದ್ದೇನೆ. ಅವರು ನನಗೆ ಆರ್ಡಿಎಕ್ಸ್ ಪಡೆಯಲು ಸಹಾಯ ಮಾಡಿದ್ದಾರೆ. ನನಗೆ ಸುಲಭವಾಗಿ ಬಾಂಬ್ ಸಿಕ್ಕಿದ್ದೂ ಈ ವಿಚಾರದಲ್ಲಿ ನನಗೆ ಖುಷಿ ಇದೆ. ನಾನು ಎಲ್ಲ ಕಡೆಯೂ ಬ್ಲಾಸ್ಟ್ ಮಾಡಿಯೇ ಮಾಡುತ್ತೇನೆ. ನೀವು ನನ್ನನ್ನ ತಡೆಯಬಹುದು, ಆದರೆ ಪ್ಲಾನ್ ಈಗಾಗಲೇ ರೆಡಿಯಾಗಿದೆ.
PublicNext
01/04/2022 03:48 pm