ಬೆಂಗಳೂರು: ಎರಡು ದಿನಗಳ ಬೆಂಗಳೂರು ಭೇಟಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು HAL ನ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ, ಸಚಿವರಾದ ವಿ.ಸೋಮಣ್ಣ, ಆರ್ .ಅಶೋಕ್, ಗೋವಿಂದ ಕಾರಜೋಳ, ಬಿ ಶ್ರೀರಾಮುಲು ಡಾ. ಅಶ್ವಥ್ ನಾರಾಯಣ,ಬಿಸಿ ಪಾಟೀಲ್ ,ಕೆ ಗೋಪಾಲಯ್ಯ, ಆರಗ ಜ್ಞಾನೆಂದ್ರ , ಆನಂದ್ ಸಿಂಗ್ ಸೇರಿದಂತೆ ಇನ್ನೂ ಅನೇಕ ನಾಯಕರು ಉಪಸ್ಥಿತರಿದ್ದರು.
PublicNext
01/04/2022 08:22 am