ಬೆಂಗಳೂರು: ಧಾರ್ಮಿಕ ವಿಭಜನೆಯನ್ನ ಪರಿಹರಿಸಿ ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಈಗಾಗಲೇ ಟ್ವಿಟರ್ ಮಾಡಿದ್ದಾರೆ. ಸಿಎಂ ಬೊಮ್ಮಾಯಿ ಈ ಒಂದು ಟ್ವೀಟ್ ಗೆ ಈಗ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು ! ಈ ಒಂದು ಧಾರ್ಮಿಕ ವಿಭಜನೆ ಪರಿಹರಿಸಬಹುದು. ಆದರೆ ಕೂತು ಈ ಬಗ್ಗೆ ಚರ್ಚೆ ಮಾಡಿದರೆ ಸಾಕು. ಸಮಸ್ಯೆ ಬಗೆಹರಿಸಲು ಸಾಧ್ಯ ಅಂತಲೆ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಐಟಿ-ಬಿಟಿಯಲ್ಲೂ ಕೋಮುವಾದ ಬಂದ್ರೆ ಏನ್ ಗತಿ.ಅದು ನಮ್ಮ ಜಾಗತಿಕ ನಾಯಕತ್ವವನ್ನ ನಾಶಪಡಿಸುತ್ತದೆ. ಬಸವರಾಜ್ ಬೊಮ್ಮಾಯಿ ಅವರೇ, ದಯವಿಟ್ಟು ಬೆಳೆಯುತ್ತಿರೋ ಧಾರ್ಮಿಕ ವಿಭಜನೆಯನ್ನ ಪರಿಹರಿಸಿ ಎಂದು ಕಿರಣ್ ಮಜುಂದಾರ್ ಕೇಳಿಕೊಂಡಿದ್ದರು.
PublicNext
31/03/2022 04:50 pm