ಬೆಂಗಳೂರು: ರಾಜ್ಯದ ಪಿಂಚಣಿದಾರರಿಗಾಗಿಯೇ ರಾಜ್ಯ ಸರ್ಕಾರ ಈಗೊಂದು ಹೊಸ ಐಡಿಯಾ ಮಾಡಿದೆ. 'ಹೆಲೋ ಸಚಿವರೇ' ಎಂದು ಹೇಳಿದ್ರೆ ಸಾಕು. ಕೇವಲ 72 ಗಂಟೆಯಲ್ಲಿ ಪಿಂಚಣಿ ಪತ್ರ ನಿಮ್ಮ ಮನೆಗೆ ಬಂದು ಸೇರುತ್ತದೆ.
ಹೌದು ಸರ್ಕಾರ ಇಂತಹ ಒಂದು ತಂತ್ರಾಂಶವನ್ನ ಡೆವೆಲೆಪ್ ಮಾಡಿದೆ. ಈ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಈಗ ಅಧಿಕೃತ ಮಾಹಿತಿ ಕೊಟ್ಟಿದ್ದಾರೆ.
ಬಿಜೆಪಿ ತುಳಸಿ ಮುನಿರಾಜುಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರ್.ಅಶೋಕ್, ಪಿಂಚಣಿ ವ್ಯವಸ್ಥೆಗಾಗಿಯೇ ನೂತನ ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದೆ. ಸಹಾಯವಾಣಿ ಸ್ಥಾಪಿಸಲು ಕೂಡ ತೀರ್ಮಾನಿಸಲಾಗಿದೆ. ಈ ಸಹಾಯವಾಣಿಗೆ ಕರೆ ಮಾಡಿದವರ ಬಿಪಿಎಲ್ ಕಾರ್ಡ್, ಆಧಾರ ಗುರುತಿನ ಸಂಖ್ಯೆಯಲ್ಲೆ ಎಲ್ಲ ವಿವರ ಲಭ್ಯವಿರಲಿದೆ ಅಂತಲೇ ಆರ್.ಅಶೋಕ್ ಹೇಳಿದ್ದಾರೆ.
ಒಂದು ವೇಳೆ ಪಿಂಚಣಿದಾರರಿಗೆ ಪಿಂಚಣಿ ಮಂಜೂರಾತಿ ಪತ್ರ ತಲುಪದೇ ಇದ್ದರೇ, ಆಯಾ ಪಿಂಚಣಿದಾರರ ಬ್ಯಾಂಕ್ ಅಕೌಂಟ್‌ಗೆ ದುಡ್ಡು ಜಮಾ ಆಗುತ್ತದೆ ಅಂತಲೂ ಆರ್.ಅಶೋಕ್ ವಿವರಿಸಿದ್ದಾರೆ.
PublicNext
31/03/2022 03:35 pm