ಬೆಂಗಳೂರು:ಸಲಾಂ ಆರತಿ ಬಗ್ಗೆನೂ ಈಗ ಭಾರಿ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿಯೇ ಸಿ.ಎಂ ಇಬ್ರಾಹಿಂ ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ. ರಾಯಚೂರು ಮಂತ್ರಾಲಯದ ಮಠಕ್ಕೆ ಸಾಬ್ರೇ ಜಾಗ ಕೊಟ್ಟಿದ್ದಾರೆ. ಬೇಡವಾದ್ರೆ ಆ ಜಾಗ ವಾಪಸ್ ಕೊಟ್ಟು ಹೊರಟು ಹೋಗಿ ಅಂತಲೇ ಇಬ್ರಾಹಿಂ ಖಾರವಾಗಿಯೇ ಪ್ರತಿಕ್ರಿಯೆ ಮಾಡಿದ್ದಾರೆ.
ಸಲಾಂ ಆರತಿಯನ್ನ ಮೂಕಾಂಬಿಕಾ,ಶೇಂಗೇರಿ ದೇವಾಲಯದಲ್ಲೂ ಮಾಡುತ್ತಾರೆ. ಸತ್ತ ವ್ಯಕ್ತಿಯ ಹೆಸರಲ್ಲಿ ಸಲಾಂ ಆರತಿ ಮಾಡ್ತಿರೋದು ಕೇವಲ ಟಿಪ್ಪು ಸುಲ್ತಾನ್ ಹೆಸರಲ್ಲಿ ಮಾತ್ರ.ಹೀಗಿರೊವಾಗ ರಾಯರ ಮಠದ ಬೃಂದಾವನಕ್ಕೆ ಜಾಗ ಕೊಟ್ಟಿದ್ದು ಸಾಬರೇ.ಒಂದು ವೇಳೆ ನಿಮ್ಗೆ ಇದು ಬೇಡವಾದರೆ,ಜಾಗ ಕೊಟ್ಟು ಹೋಗಿ ಅಂತಲೇ ಸಿಎಂ ಇಬ್ರಾಹಿಂ ಪ್ರಶ್ನಿಸಿದ್ದಾರೆ.
ಹಲಾಲ್ ಕಟ್ ಮಾಡಿದ್ರೆ ರಕ್ತ ಹೊರಗೆ ಬರುತ್ತದೆ. ಇದು ವೈಜ್ಞಾನಿಕವೇ ಆಗಿದೆ. ಜಟ್ಕಾ ಕಟ್ ನಲ್ಲಿ ರಕ್ತ ಹೊರಗೆ ಬರೋದಿಲ್ಲ. ಪಶು ವೈದ್ಯರು ಎರಡೂ ವೈಜ್ಞಾನಿಕ ಅನ್ನೋದೇ ಆದರೆ, ಅವರೂ ಅದನ್ನ ತಿನ್ನಲಿ ಅಂತಲೇ ತಿರುಗೇಟು ನೀಡಿದ್ದಾರೆ ಸಿಎಂ ಇಬ್ರಾಹಿಂ.
PublicNext
30/03/2022 10:57 pm