ಪಾಕಿಸ್ತಾನ್: ಉಗ್ರ ಅಜ್ಮಲ್ ಕಸಬ್ ನಮ್ಮವನೇ. ನವಾಜ್ ಷರೀಫ್ ಆಗಲೇ ಹೇಳಿದ್ದರು. ಪಾಕಿಸ್ತಾನದ ಗೃಹ ಸಚಿವ ಶೇಖ್ ರಶೀದ್ ಕೂಡ ಇಷ್ಟು ವರ್ಷ ಆದ್ಮೇಲೆ ಈಗ ಇದನ್ನೇ ಮತ್ತೆ ಹೇಳಿಕೊಂಡಿದ್ದಾರೆ.
ಪ್ರಧಾನಿ ಇಮ್ರಾನ್ ಖಾನ್ ಸಂಪುಟದಲ್ಲಿಯೇ ಇರೋ ಶೇಖ್ ರಶೀದ್ ಇಮ್ರಾನ್ ಖಾನ್ ಸಮ್ಮುಖದಲ್ಲಿಯೇ ಈ ವಿಷಯವನ್ನ ಈಗ ಹೇಳಿಕೊಂಡಿದ್ದಾರೆ.
ಅಜ್ಮಲ್ ಕಸಬ್ ಪಾಕಿಸ್ತಾನದವನೇ.ತಮ್ಮ ದೇಶದಲ್ಲಿಯೇ ಇರೋ ಫರೀದ್‌ಕೋಟ್‌ನವನೇ ಈ ಕಸಬ್ ಅಂತ ಹೇಳಿದ್ದಾರೆ. ಈ ಹಿಂದೇನೆ ನವಾಬ್ ಶರೀಫ್ ಈ ವಿಷಯವನ್ನ ಭಾರತಕ್ಕೆ ಹೇಳಿ ಬಿಟ್ಟಿದ್ದಾರೆ. ಒಂದು ವೇಳೆ ಹೀಗೆ ಶರೀಫ್ ಹೇಳಿಯೇ ಇಲ್ಲ ಅಂದ್ರೆ, ಒಬ್ಬ ಕಳ್ಳನಿಗೆ ಕೊಡುವ ಶಿಕ್ಷೆಯನ್ನ ನನಗೂ ಕೊಟ್ಟು ಬಿಡಲಿ ಅಂತಲೇ ವಿಶ್ವಾದಿಂದಲೇ ಹೇಳಿದ್ದಾರೆ ಶೇಕ್ ರಶೀದ್.
======
PublicNext
30/03/2022 10:37 pm