ಬೆಂಗಳೂರು: ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಹೊಸ ಹೊಸ ಪ್ಲಾನ್ ಮಾಡುತ್ತಿದ್ದು, ಪಂಜಾಬ್‌ನಲ್ಲಿ ಭಾರಿ ಗೆಲುವಿನ ಬಳಿಕ ಈಗ ಕರ್ನಾಟಕದ ಮೇಲೂ ಕಣ್ಣಿಟ್ಟಿದ್ದಾರೆ. ಈಗಾಗಲೇ ಅರವಿಂದ್ ಕೇಜ್ರಿವಾಲ್ ಇಲ್ಲಿಯ ನಾಯಕರನ್ನ ಸ್ವತಃ ಅಪ್ರೋಚ್ ಮಾಡಿದ್ದಾರೆ ಅನ್ನೋ ಸುದ್ದಿ ದಟ್ಟವಾಗಿಯೇ ಹರಿದಾಡುತ್ತಿದೆ.
ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಕರ್ನಾಟಕದ ವಿವಿಧ ಕ್ಷೇತ್ರದ ವ್ಯಕ್ತಿಗಳನ್ನ ಅಪ್ರೋಚ್ ಮಾಡಿದ್ದಾರೆ. ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ,ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ,ಮಾಜಿ ಸಚಿವ ಕಿಮ್ಮನೆ ರತ್ನಾಕರ್,ನಿವೃತ್ತ ಎಡಿಜಿಪಿ ಭಾಸ್ಕರ್ ರಾವ್ ಹೀಗೆ ಹಲವರ ಪಟ್ಟಿ ಮಾಡಿಕೊಂಡಿದ್ದಾರೆ ಅರವಿಂದ್ ಕೇಜ್ರಿವಾಲ್.
ಈ ಎಲ್ಲ ಪ್ರಮುಖರ ಜೊತೆಗೆ ಫೋನ್ ನಲ್ಲಿ ಮಾತುಕತೆ ನಡೆದಿದ್ದು,ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳು ಭೇಟಿಗೂ ಅವಕಾಶ ಕೇಳುತ್ತಿದ್ದಾರೆ ಅಂತಲೂ ಮಾಹಿತಿ ಇದೆ.
PublicNext
29/03/2022 09:37 pm