ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂದಿನ ವರ್ಷ ಕೊರೊನಾ 4ನೇ ಅಲೆ ಬಾರದಿರಲೆಂದು ಪ್ರಾರ್ಥಿಸುತ್ತೇನೆ: ಸಿದ್ದರಾಮಯ್ಯ

ಬೆಂಗಳೂರು: ಕೊರೊನಾ ಸಾಂಕ್ರಾಮಿಕದಿಂದ ಜನ ಈಗಾಗಲೇ ಸಾಕಷ್ಟು ಸಂಕಷ್ಟ ಎದುರಿಸಿದ್ದಾರೆ. ಮುಂದಿನ ವರ್ಷ ಮತ್ತೆ ಕೊರೊನಾ ಬಾರದಿರಲಿ. ಅದಕ್ಕಾಗಿ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಮಂಗಳವಾರ ಬೇಡಿಕೆ ಮೇಲಿನ ಚರ್ಚೆಗೆ ಉತ್ತರದ ಸಂದರ್ಭದಲ್ಲಿ ಮಾತನಾಡಿದ ಅವರು "ಕೋವಿಡ್ ಬಂದು ಮತ್ತೆ ಲಾಕ್ ಡೌನ್ ಆದರೆ ಆರ್ಥಿಕತೆ ಬಿದ್ದು ಹೋಗುತ್ತದೆ. ಕೋವಿಡ್‌ಗೆ ಒಂಬತ್ತು ಸಾವಿರ ಕೋಟಿ ಖರ್ಚಾಗಿದೆ ಎಂದು ನಾನು ತಿಳಿದಿದ್ದೆ. ಆದ್ರೆ 15 ಸಾವಿರ ಕೋಟಿ ಖರ್ಚಾಗಿದೆ ಎಂದು ಸರಕಾರವೇ ಹೇಳಿದೆ. ಬೇರೆ ರಾಜ್ಯಗಳು ನಮಗಿಂತ ಹೆಚ್ಚು ಖರ್ಚು ಮಾಡಿದ್ದಾರೆ. ಕೇರಳ ಸರಕಾರ ನಮಗಿಂತ ಹೆಚ್ಚು ಖರ್ಚು ಮಾಡಿದೆ" ಎಂದರು. ಸಾಲ ಮಾಡಬೇಡಿ ಅನ್ನಲ್ಲ. ಆದರೆ ಅನಗತ್ಯ ವೆಚ್ಚ ಕಡಿಮೆ ಮಾಡಬೇಕು. ಏಳನೇ ವೇತನ ಆಯೋಗ ಮಾಡಿ. ನಾನು ಸ್ವಾಗತ ಮಾಡ್ತೇನೆ. ಆದರೆ ಆರ್ಥಿಕ ಶಿಸ್ತು ಇಲ್ಲದೇ ಹೋದ್ರೆ ಯಾವ ರಾಜ್ಯವು ಆರ್ಥಿಕ ಬೆಳವಣಿಗೆ ತರಲು ಸಾಧ್ಯವಿಲ್ಲ ಎಂದು ಸರಕಾರಕ್ಕೆ ಸಲಹೆ ನೀಡಿದರು.

Edited By : Nagaraj Tulugeri
PublicNext

PublicNext

29/03/2022 07:31 pm

Cinque Terre

43.43 K

Cinque Terre

5

ಸಂಬಂಧಿತ ಸುದ್ದಿ