ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿಗೆ ಬ್ರಿಟನ್ ಸಂಸತ್ತಿನಿಂದ ಆಹ್ವಾನ

ನವದೆಹಲಿ: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರನ್ನು ಬ್ರಿಟನ್ ಸಂಸತ್ತು ಆಹ್ವಾನಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಖುಷಿ ಹಂಚಿಕೊಂಡಿರುವ ವಿವೇಕ್ ಅಗ್ನಿಹೋತ್ರಿ, ಬ್ರಿಟನ್ ಸಂಸತ್ತಿನವರು ತಮ್ಮನ್ನು ಆಹ್ವಾನಿಸಿದ್ದು ಅಲ್ಲಿಗೆ ಪತ್ನಿ ಪಲ್ಲವಿ ಸಮೇತ ಹೋಗುತ್ತಿದ್ದೇನೆ ಮತ್ತು ಸಿನಿಮಾದ ಬಗ್ಗೆ ಹಾಗೂ ಕಾಶ್ಮೀರಿ ಪಂಡಿತರ ನರಮೇಧದ ಬಗ್ಗೆ ತಿಳಿಸಲಿದ್ದೇನೆ ಎಂದಿದ್ದಾರೆ. ಬ್ರಿಟನ್ ಸಂಸತ್ತಿಗೆ ಹೋಗುತ್ತಿರುವುದಕ್ಕೆ ನನಗೆ ಖುಷಿ ಇದೆ ಎಂದಿದ್ದಾರೆ.

1990ರ ಸಮಯದಲ್ಲಿ ಕಾಶ್ಮೀರದ ಪಂಡಿತರು ಅನುಭವಿಸಿದ ಕಷ್ಟಗಳೇನು ಎನ್ನುವುದನ್ನು ‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾ ಮೂಲಕ ಜನರ ಮುಂದಿಡುವ ಪ್ರಯತ್ನವನ್ನು ವಿವೇಕ್​ ಅಗ್ನಿಹೋತ್ರಿ ಮಾಡಿದ್ದಾರೆ. ಈ ಚಿತ್ರದಿಂದ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಅವರ ಕಾರ್ಯಕ್ಕೆ ಎಲ್ಲ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರೇಕ್ಷಕ ಪ್ರಭುಗಳು ಕೂಡ ಚಿತ್ರಕ್ಕೆ ಜೈ ಎಂದಿದ್ದಾರೆ.

Edited By : Nagaraj Tulugeri
PublicNext

PublicNext

29/03/2022 04:40 pm

Cinque Terre

35.55 K

Cinque Terre

4

ಸಂಬಂಧಿತ ಸುದ್ದಿ