ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಿಪ್ಪು ಮೈಸೂರು ಹುಲಿ ಅಲ್ಲ, ಇಲಿ: ಅಪ್ಪಚ್ಚು ರಂಜನ್

ಬೆಂಗಳೂರು: ಟಿಪ್ಪು ಸುಲ್ತಾನ್ ಮೈಸೂರು ಹುಲಿ ಅಲ್ಲ, ಇಲಿ ಅಂತ ಮಡಿಕೇರಿ ಅಪ್ಪಚ್ಚು ರಂಜನ್‌ ವ್ಯಂಗ್ಯವಾಡಿದ್ದಾರೆ.

ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಹೇಳಿದರು, ಇದೇ ವೇಳೇ ಅವರು ಮಾತನಾಡುತ್ತ, ಟಿಪ್ಪು ಸುಲ್ತಾನ್‌ ಸಾವಿರಾರು ಕೊಡವರನ್ನು ಕೊಂದಿರುವ ಬಗ್ಗೆ ಬ್ರಿಟನ್‌ ಲೈಬ್ರರಿಯಿಂದ ಪುಸ್ತಕ, ದಾಖಲೆಯನ್ನು ಶಾಲಾ ಪಠ್ಯ ಸಮಿತಿಗೆ ದಾಖಲೆಗಳನ್ನು ನೀಡಿದ್ದೇವೆ, ಟಿಪ್ಪು ಔತಣಕ್ಕೆಂದು ಕೊಡವರನ್ನು ಕೊಂದು ಸಾವಿರಾರರು ಮಂದಿಯನ್ನು ಸಾಯಿಸಿದನು ಎಂದು ಅವರು ಇದೇ ವೇಳೆ ಆರೋಪಿಸಿದರು.

ನಾವು ನೀಡಿರುವ ದಾಖಲೆಗಳ ಆಧಾರದ ಮೇಲೆ ಸರ್ಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಶಾಸಕ ಅಪ್ಪಚ್ಚು ರಂಜನ್‌ ವಿಶ್ವಾಸವನ್ನು ವ್ಯಕ್ತಪಡಿಸಿದರು.

Edited By : Nagaraj Tulugeri
PublicNext

PublicNext

29/03/2022 03:51 pm

Cinque Terre

32.17 K

Cinque Terre

14