ಹಾಸನ : ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಐಟಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಈ ಕುರಿತು ಹಾಸನದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಜಮೀನಿನಲ್ಲಿ ಕಬ್ಬು ಬೆಳೆಯುತ್ತಿದ್ದೇವೆ, ಅದನ್ನು ನೋಡಬೇಕು. ಅದನ್ನು ನೋಡದೆ ನಮ್ಮ ತಾಯಿಗೆ ನೋಟಿಸ್ ಕೊಟ್ಟಿದ್ದಾರೆ. ಆರ್.ಟಿ.ಓ.ದಲ್ಲಿ ನೂರು ಕೋಟಿ ಇನ್ನೂರು ಕೋಟಿ ಲೂಟಿ ಹೊಡಿತ್ತಿದ್ದಾರೆ ಅವರಿಗೇಕೆ ನೋಟೀಸ್ ನೀಡಲ್ಲ ಎಂದು ಕಿಡಿಕಾರಿದ್ದಾರೆ.
ಒಂದು ಎಕರೆಯಲ್ಲಿ ಎಷ್ಟು ಬೆಳೆ ಬೆಳೆಯುತ್ತೇವೆ ಬಂದು ನೋಡಲಿ ನಾನು ಸರ್ವೆ ಮಾಡಿ ಬಿಲ್ ಕೊಟ್ಟರೆ ಸರಿಯಾಗಲ್ಲ. ಡಿಸಿಯವರೇ ಆ್ಯಪ್ ನಲ್ಲಿ ಸರ್ವೆ ಮಾಡಿಸಲಿ, ನಮ್ಮ ಅಪ್ಪ, ಅಮ್ಮ ಏನಾದ್ರು ಕೋಟ್ಯಾಂತರು ರೂ ಆಸ್ತಿ ಮಾಡಿದ್ದಾರಾ?
ನೋಟೀಸ್ ಕೊಟ್ಟಿದ್ದಾರೆ ಅದಕ್ಕೆ ಉತ್ತರ ಕೊಡ್ತೀವಿ, ನಮಗೂ ಕಾಲ ಬರುತ್ತೆ, ನಾವೆನಾದ್ರೂ ಕದ್ದು ವ್ಯವಸಾಯ ಮಾಡುತ್ತಿದ್ದೇವಾ ಬೇಕಿದ್ದರೆ ದ್ರೋಣ್ ಸರ್ವೆ ಮಾಡಲಿ, ದೊಡ್ಡಪುರ, ಪಡುವಲಹಿಪ್ಪೆ ಹತ್ತಿರ ನಮ್ಮ ಜಮೀನು ಇದೆ.
ಒಂದು ಪಕ್ಷವನ್ನು ಗುರಿಯಾಗಿಸಿಕೊಂಡು ಈ ರೀತಿ ಮಾಡಬೇಡಿ ಕಾನೂನು ರೀತಿ ಏನಿದೆ ನೋಟಿಸ್ ಕೊಡಿ, ನನಗೂ ಕೊಡಿ,ಕೆಲವರು ಆರ್.ಟಿ.ಓ.ನಲ್ಲಿ ಲೂಟಿ ಮಾಡಿ ಕೆಲಸಕ್ಕೆ ರಾಜೀನಾಮೆ ನೀಡಿ ಬಂದು ಕೋಟಿಗಟ್ಟಲೆ ಹಣ ಖರ್ಚು ಮಾಡಿ ಎಲೆಕ್ಷನ್ ಗೆ ನಿಲ್ಲುತ್ತಿದ್ದಾರೆ. ಅಂತಹವರಿಗೂ ನೋಟಿಸ್ ನೀಡುವುದನ್ನು ಮರೆಯದಿರಿ ಎಂದಿದ್ದಾರೆ.
PublicNext
28/03/2022 03:53 pm