ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು 'ದಿ ಕಾಶ್ಮೀರ್ ಫೈಲ್ಸ್' ನೋಡಿ: ಅಮಿತ್ ಶಾ

ನವದೆಹಲಿ: ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಕಾಶ್ಮೀರ ಕಣಿವೆಯಲ್ಲಿ ದೌರ್ಜನ್ಯ ಮತ್ತು ಭಯೋತ್ಪಾದನೆ ಹೇಗೆ ನಡೆದಿದೆ ಎಂಬುವುದನ್ನು ತಿಳಿಯಲು ಜನರು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ನೋಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್‍ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದ ವೇಳೆ ಕಾಶ್ಮೀರದಲ್ಲಿ ಹೇಗೆ ದೌರ್ಜನ್ಯ ಮತ್ತು ಭಯೋತ್ಪಾದನೆ ನಡೆದಿದೆ ಎಂದು ತಿಳಿದುಕೊಳ್ಳಲು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡದೇ ಇರುವವರು ನೋಡಬೇಕು ಎಂದಿದ್ದಾರೆ.

'ನೀವು ನರೇಂದ್ರ ಭಾಯಿ (ನರೇಂದ್ರ ಮೋದಿ) ಅವರನ್ನು ಎರಡನೇ ಬಾರಿಗೆ ಪ್ರಧಾನಿ ಮಾಡಿದಾಗ ಅವರು ಆಗಸ್ಟ್ 5, 2019 ರಂದು 370ನೇ ವಿಧಿಯನ್ನು ತೆಗೆದುಹಾಕಿದರು. ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯವರ ಚಲನಚಿತ್ರ "ದಿ ಕಾಶ್ಮೀರ್ ಫೈಲ್ಸ್" ಕಾಶ್ಮೀರಿ ಪಂಡಿತರು ಅವರ ಸ್ಥಳೀಯ ರಾಜ್ಯದಿಂದ ಬಲವಂತದ ನಿರ್ಗಮನವನ್ನು ಆಧರಿಸಿದೆ. ಇದು 1990 ರ ದಶಕದ ಆರಂಭದಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರಿಂದ ಸಮುದಾಯವನ್ನು ಗುರಿಯಾಗಿಸಿದ ನಂತರ ಪ್ರಾರಂಭವಾಯಿತು ಎಂದು ಅಮಿತ್ ಶಾ ಹೇಳಿದ್ದಾರೆ.

Edited By : Vijay Kumar
PublicNext

PublicNext

27/03/2022 06:41 pm

Cinque Terre

26.08 K

Cinque Terre

22