ಬೆಂಗಳೂರು: ಹಿಜಾಬ್ ಧರಿಸಿದರೇ SSLC ಪರೀಕ್ಷೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂಬ ಸರ್ಕಾರದ ಆದೇಶವನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತೀವ್ರ ವಿರೋಧಿಸಿದ್ದಾರೆ.
ಸರ್ಕಾರದ ಈ ಆದೇಶ ಸರಿ ಅಲ್ಲವೇ ಅಲ್ಲ. ಮಕ್ಕಳ ಶಿಕ್ಷಣದ ಬಗ್ಗೆ ಸರ್ಕಾರ ಗಮನ ಹರಸಿಬೇಕು. ಪೋಷಕರೂ ಈ ಬಗ್ಗೆ ಯೋಚಿಸಬೇಕು. ಇದು ಸರಿ ಅಲ್ಲವೇ ಅಲ್ಲ ಅಂತಲೇ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಕ್ಕಳು ತಪ್ಪು ಮಾಡಬಹುದು. ಅವರಿಗೆ ಹಠ ಇರಬಹುದು. ಆದರೆ ಅವರಿಗೆ ಬುದ್ದಿ ಹೇಳುವ ಕೆಲಸ ಆಗಬೇಕು. ಪೋಷಕರು ಆ ಕೆಲಸ ಮಾಡಬೇಕು.ಶಿಕ್ಷಕರು,ಧರ್ಮಗುರುಗಳು ಮಕ್ಕಳಿಗೆ ತಿಳಿ ಹೇಳಬೇಕು ಅಂತಲೇ ಡಿಕೆಶಿ ವಿವರಿಸಿದ್ದಾರೆ.
PublicNext
26/03/2022 10:41 pm