ಉತ್ತರ ಪ್ರದೇಶ: ಕೋವಿಡ್ ಸಮಯದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಉಚಿತ ಪಡಿತರ ಯೋಜನೆ ಆರಂಭಿಸಿತ್ತು. ಅದನ್ನ ಈಗ ಎರಡನೇ ಬಾರಿ ಸಿಎಂ ಆಗಿರೋ ಯೋಗಿ ಆದಿತ್ಯನಾಥ್ ಹೊಸ ಸಂಪುಟ ಇನ್ನು ಮೂರು ತಿಂಗಳು ವಿಸ್ತರಿಸಿದೆ.
ಸಂಪುಟ ಸಭೆ ಬಳಿಕ ಯೋಗಿ ಆದಿತ್ಯನಾಥ್ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನ ಮಾರ್ಚ್-31 ರಿಂದ ಜೂನ್ 30 ರವರೆಗೂ ವಿಸ್ತರಿಸಲು ನಾವು ನಿರ್ಧರಿಸಿದ್ದೇವೆ ಅಂತಲೇ ಹೇಳಿದ್ದಾರೆ
ಉಚಿತ ಪಡಿತರ ಯೋಜನೆಯಿಂದ ರಾಜ್ಯದ 15 ಕೋಟಿ ಜನರಿಗೆ ಅನುಕೂಲ ಆಗುತ್ತದೆ ಅಂತಲೂ ಯೋಗಿ ಆದಿತ್ಯನಾಥ್ ಶನಿವಾರ ವಿವರಿಸಿದ್ದಾರೆ.
PublicNext
26/03/2022 04:12 pm