ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೆರೋಲ್ ಖೈದಿ ಪರಾರಿ ಆದ್ರೆ ಜಾಮೀನು ಕೊಟ್ಟವರ ಆಸ್ತಿ ಜಪ್ತಿ !

ಬೆಂಗಳೂರು: ಪೆರೋಲ್ ಪಡೆಯೋ ಖೈದಿಗೆ ಜಾಮೀನು ಕೊಡುವವರೇ ಹುಷಾರ್. ಒಂದು ವೇಳೆ ಖೈದಿ ಪರಾರಿ ಆದ್ರೆ ಮುಗಿತು ನಿಮ್ಮ ಕತೆ. ನಿಮ್ಮ ಆಸ್ತಿ ಜಪ್ತಿ ಆಗೋದು ಗ್ಯಾರಂಟಿ.

ಗೃಹ ಸಚಿವ ಆರಗ ಜ್ಞಾನೇಂದ್ರ ಇದನ್ನ ಈಗ ವಿಧಾನಪರಿಷತ್ ನಲ್ಲಿ ಅಂಗೀಕರಿಸಿದ್ದಾರೆ. ಈ ವಿಧೇಯಕ ತರಲು ಕಾರಣ, ಪೆರೋಲ್ ಪಡೆದ ವ್ಯಕ್ತಿಯ ಮೇಲೆ ಜಾಮೀನು ಕೊಟ್ಟ ವ್ಯಕ್ತಿಗೆ ಜವಾಬ್ದಾರಿ ಇರಲೇಬೇಕು ಅನ್ನೋದೇ ಈ ವಿಧೇಯಕದ ಉದ್ದೇಶ ಆಗಿದೆ ಅಂತಲೇ ಹೇಳಿದ್ದಾರೆ.

ನ್ಯಾಯಯುತವಾಗಿ ಜಾಮೀನು ನೀಡುವವರಿಗೆ ಇದರಿಂದ ತೊಂದರೆ ಆಗೋದಿಲ್ಲ. ಆದರೆ, ಜಾಮೀನು ನೀಡೋದೇ ಒಂದು ದಂಧೆ ಮಾಡಿಕೊಂಡೋರಿಗೆ ಇದು ತಕ್ಕ ವಿಧೇಯಕವಾಗಿದೆ ಅಂತಲೇ ಆರಗ ಜ್ಞಾನೇಂದ್ರ ವಿವರಿಸಿದ್ದಾರೆ.

Edited By :
PublicNext

PublicNext

25/03/2022 09:57 am

Cinque Terre

47.19 K

Cinque Terre

2

ಸಂಬಂಧಿತ ಸುದ್ದಿ