ವಿಜಯನಗರ : ಬಿಜೆಪಿಯವರು ದೇಶವನ್ನ ಇಬ್ಭಾಗ ಮಾಡಲು ಹೊರಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಾವು ಯಾರಿಗೂ ಧರ್ಮ ಬಿಡಿ ಅಂತಾ ಹೇಳ್ತಿಲ್ಲ, ಅವರ ಧರ್ಮ ಅವರು ಪಾಲಿಸಬೇಕು ವ್ಯಾಪಾರ ವಹಿವಾಟು ಮಾಡುವ ವೇಳೆ ಮಾನವೀಯತೆ ಬಿಟ್ಟು ನಡೆದುಕೊಳ್ಳುತ್ತಿದ್ದಾರೆ, ಇದು ದೇಶಕ್ಕೆ ದೊಡ್ಡ ಅಪಾಯ, ಇದಕ್ಕೆ ಸಿಎಂ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದರು.
ಇನ್ನು ಸಿಎಂ ನೈತಿಕ ಪೊಲೀಸಗಿರಿ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಇದೇ ರೀತಿ ಆದ್ರೆ ಬಂಡವಾಳ ಹೂಡಿಕೆದಾರರು ರಾಜ್ಯಕ್ಕೆ ಬರಲ್ಲ. ಬಿಜೆಪಿ ವರ್ತನೆ ದೇಶಕ್ಕೆ ಮಾರಕವಾಗುತ್ತೆ ಎಂದು ಗುಡುಗಿದ್ದಾರೆ.
ಬಿಜೆಪಿಯವರರಿಂದ ಲಾಭ ಆಗಲ್ಲ, ಡೀಸೆಲ್, ಗ್ಯಾಸ್ ಬೆಲೆ ಹೆಚ್ಚಳ ಮಾಡಿ ಜನಸಾಮಾನ್ಯರ ಪಿಕ್ ಪಾಕೇಟ್ ಮಾಡುತ್ತಿದ್ದಾರೆ. ನಾವೂ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಸುತ್ತೇವೆ. ಈ ಬಾರಿ ಹೊಸ ಮುಖಗಳಿಗೆ, ಯುವಕರಿಗೆ ಹೆಚ್ಚಿನ ಆದ್ಯತೆಯಲ್ಲಿ ಟಿಕೆಟ್ ಹಂಚಿಕೆ ಮಾಡುತ್ತೇವೆ ಎಂದು ಹೇಳಿದ್ದಾರೆ.
PublicNext
24/03/2022 09:43 pm