ನವದೆಹಲಿ : ದೆಹಲಿಯಲ್ಲಿ ಮಹಾನಗರ ಪಾಲಿಕೆ ಚುನಾವಣೆಗಳ ಹಿನ್ನೆಲೆ ಎಲ್ಲ ರಾಜಕೀಯ ಮುಖಂಡರು ಅಕಾಡಕ್ಕೆ ಇಳಿದಿದ್ದಾರೆ.
ಇತ್ತ ಆಮ್ ಆದ್ಮಿ ಪಕ್ಷದ (AAP) ಕಾರ್ಪೊರೇಟರ್ ಚರಂಡಿ ಕ್ಲೀನ್ ಗೆ ಮುಂದಾಗಿದ್ದಾರೆ. ಹೌದು ಸಿನಿಮಾ ರೀತಿಯಲ್ಲಿ AAP ನಾಯಕ ಹಸೀಬ್ ಉಲ್ ಹಸನ್ (Haseeb-Ul-Hasan) ಎಂಬವರು ಚರಂಡಿಗೆ ಇಳಿದು ಸ್ವಚ್ಛಗೊಳಿಸುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ.
ಇನ್ನು ಕಾರ್ಪೊರೇಟರ್ ಚರಂಡಿ ಕ್ಲೀನ್ ಮಾಡಿದ ಮೇಲೆ ಎಎಪಿ ಕಾರ್ಯಕರ್ತರು ಹಾಲಿನ ಅಭಿಷೇಕ ಮಾಡಿದ್ದಾರೆ.ಅಂದಹಾಗೆ ನಾಯಕ್ ಚಿತ್ರದಲ್ಲಿ ನಟ ಅನಿಲ್ ಕಪೂರ್ ಅವರ ಶೈಲಿಯಲ್ಲಿದೆ ಕಾರ್ಪೊರೇಟರ್ ಕಾರ್ಯವಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಇದ್ದೇಲ್ಲದರ ಮಧ್ಯೆ ಮಾಧ್ಯಮಗಳ ಜೊತೆ ಮಾತನಾಡಿದ ಕಾರ್ಪೊರೇಟರ್ ಚರಂಡಿ ತುಂಬಿ ಹರಿಯುತ್ತಿದ್ದು, ಅಧಿಕಾರಿಗಳಿಗೆ ಪದೇ ಪದೇ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಹಾಗಾಗಿ ನಾನೇ ಈ ಕಾರ್ಯ ಮಾಡಿರುವುದಾಗಿ ಹೇಳಿದ್ದಾರೆ.
PublicNext
23/03/2022 08:47 pm