ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಚುಕು ಗೆಳೆಯರ ಅಸಲಿ ಸ್ನೇಹ ಬಯಲು !

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರೂ ಸ್ನೇಹಿತರೇ. ಅದು ಗೊತ್ತಿರೋರಿಗೆ ಮಾತ್ರ ಗೊತ್ತು. ಆದರೆ ಆ ಸ್ನೇಹ ಇವತ್ತು ವಿಧಾನಸಭಾ ಕಲಾಪದಲ್ಲಿ ಕಂಡು ಬಂತು.

ರಾಜಕೀಯವಾಗಿ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಕಿತ್ತಾಡಿಕೊಂಡವರೇ. ಕಲಾಪಗಳಲ್ಲಿ ವಾಗ್ದಾಳಿ ನಡೆಸಿದವರೇ. ಆದರೆ ವಯುಕ್ತಿಕ ವಿಚಾರದಲ್ಲಿ ಈ ಮುಖಂಡರು ನಿಜಕ್ಕೂ ಪರಸ್ಪರ ಗೌರವ ಕೊಡುತ್ತಾರೆ. ಅದಕ್ಕೆ ಸಾಕ್ಷಿ ಆಗಿತ್ತು ಇಂದಿನ ವಿಧಾನಸಭಾ ಕಲಾಪ.

ಹೌದು. ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅಕ್ಕ-ಪಕ್ಕ ಕುಳಿತಿದ್ದರು. ಪರಸ್ಪರ ಕೈ ಹಿಡಿದುಕೊಂಡೇ ಮಾತನಾಡುತ್ತಿದ್ದರು. ಇವರ ಈ ಸ್ನೇಹಕ್ಕೆ ಇದು ದಿ ಬೆಸ್ಟ್ ಎಕ್ಸಾಂಪಲ್. ಈ ಒಂದು ಸಮಯದಲ್ಲಿ ಯುಟಿ ಖಾದರ್ ಕೂಡ ಇದ್ದರು.

ಅಂದ್ಹಾಗೆ ಇಲ್ಲಿ ಈ ನಾಯಕರು ಆತ್ಮೀಯ ಮಾತುಗಳನ್ನು ಬಿಟ್ರೆ, ಬೇರೆ ಏನೂ ಮಾತನಾಡಿರೋ ಹಾಗೆ ಕಾಣುತ್ತಿಲ್ಲ.ಆದರೆ, ಯು.ಟಿ.ಖಾದರ್ ಈ ನಾಯಕರಿಗೆ ಮುಸ್ಲಿಂ ವ್ಯಾಪಾರಿಗಳಿಗೂ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಿ ಅಂತಲೇ ಮನವಿ ಮಾಡಿದ್ದಾರೆ.

Edited By :
PublicNext

PublicNext

23/03/2022 03:00 pm

Cinque Terre

34 K

Cinque Terre

0