ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೀದಿ ರಾಜ್ಯದಲ್ಲಿ ರಾಜಕೀಯ ದಳ್ಳುರಿ-ಶ್ರೀಸಾಮಾನ್ಯರು ಬಲಿ !

ಪಶ್ಚಿಮಬಂಗಾಳ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಈಗ ಯಾವುದೂ ಸರಿಯಿಲ್ಲ. ರಾಜ್ಯ ರಾಜಕೀಯದ ದಳ್ಳುರಿಯಲ್ಲಿ ಶ್ರೀಸಾಮಾನ್ಯರು ಸಜೀವ ದಹನವಾಗುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ ಬರೋಬ್ಬರಿ 26 ಜನ ಹತ್ಯೆ ಆಗಿದ್ದಾರೆ.

ತೃಣ ಮೂಲ ಕಾಂಗ್ರೆಸ್‌ನ ಮುಖಂಡನ ಕೊಲೆ ಬಳಿಕ ಇಡೀ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಇದನ್ನ ತಡೆಯೋಕೆ ಮಾಡಬೇಕಿರೋ ಕ್ರಮದ ಬಗ್ಗೆ ಮಾತನಾಡದ ಮಮತಾ ಬ್ಯಾನರ್ಜಿ, ಇದೆಲ್ಲ ವಿರೋಧ ಪಕ್ಷಗಳ ಪಿತೂರಿ. ಸರ್ಕಾರದ ವಿರುದ್ಧ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.

ದುರಂತ ನೋಡಿ, ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಸರಿಯೇ. ಲಾ ಅಂಡ್ ಆರ್ಡರ್ ಪ್ರಾಬ್ಲಂ ಆದ್ರೆ, ಅದಕ್ಕೆ ನೇರ ಹೊಣೆ ಆಯಾ ಸರ್ಕಾರೇ. ಹೀಗೀರೋವಾಗ, ಮಮತಾ ಅವರ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.

Edited By :
PublicNext

PublicNext

23/03/2022 02:06 pm

Cinque Terre

46.02 K

Cinque Terre

10

ಸಂಬಂಧಿತ ಸುದ್ದಿ