ಬೆಂಗಳೂರು:ಮೇಕೆದಾಟು ಆಣೆಕಟ್ಟು ಯೋಜನೆ ಜಾರಿಗೆ ಬಿಡೋದಿಲ್ಲ ಎಂದು ತಮಿಳುನಾಡು ವಿಧಾನಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದೆ.ಕಾಂಗ್ರೆಸ್ ಮೈತ್ರಿ ಇರೋ ಈ ಸರ್ಕಾರದ ವಿರುದ್ಧ ಯಾಕೆ ಡಿಕೆಶಿ ಮಾತನಾಡುತ್ತಿಲ್ಲ ಅಂತಲೆ ಈಗ ಬಿಜೆಪಿ ಸಾಮಾಜಿಕ ತಾಣದ ಮೂಲಕ ಪ್ರಶ್ನೆ ಮಾಡಿದೆ.
ಮೇಕೆದಾಟು ವಿಚಾರವಾಗಿ ಕಾಂಗ್ರೆಸ್ ಪಕ್ಷ ಈಗಾಗಲೇ ಎರಡು ಭಾರಿ ಪಾದಯಾತ್ರೆ ಮಾಡಿದೆ. ಮೂರನೇ ಭಾರಿ ನೇರವಾಗಿ ತಮಿಳುನಾಡಿಗೇನೆ ಯಾಕೆ ಡಿಕೆಶಿ ಪಾದಯಾತ್ರೆ ಮಾಡಬಾರದು ಅಂತಲೇ ಬಿಜೆಪಿ ಕ್ವಶ್ಚನ್ ಕೇಳಿದೆ.
ಆದರೆ, ತಮಿಳುನಾಡು ಸರ್ಕಾರದ ಈ ನಿರ್ಧಾರ ಸದ್ಯ ಭಾರೀ ಚರ್ಚೆ ಆಗುತ್ತಿದೆ.ರಾಜ್ಯ ಸರ್ಕಾರವೂ ಇದರ ವಿರುದ್ಧ ಹೋರಾಡಲು ಸಜ್ಜಾಗುತ್ತಿದೆ. ತೀವ್ರ ವಿರೋಧವನ್ನೂ ವ್ಯಕ್ತಪಡಿಸುತ್ತಿದೆ.
PublicNext
22/03/2022 05:33 pm