ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಗವದ್ಗೀತೆ ಶ್ಲೋಕ ಹೇಳೋ ಮೂಲಕ ಬಿಜೆಪಿ ಕಾಲೆಳೆದ ಡಿಕೆಶಿ

ಬೆಂಗಳೂರು: ನಾವು ಹಿಂದೂಗಳು ನಮಗೂ ಭಗವದ್ಗೀತೆಯೆ ಶ್ಲೋಕಗಳು ಹೇಳಲು ಬರುತ್ತದೆ. ಯದಾ ಯದಾ ಹೀ ಧರ್ಮಸ್ಯ ಅಂತ ಹೇಳುತ್ತಲೇ ಸದ್ಯದ ಭಗವದ್ಗೀತೆ ವಿಚಾರಕ್ಕೆ ಸಂಬಂಧಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿ ಕಾರಿದ್ದಾರೆ.

ಭಗವದ್ಗೀತೆಯನ್ನ ಈಗ ಬಿಜೆಪಿಯವರು ಪಠ್ಯದಲ್ಲಿ ತರೋಕೆ ಹೊರಟಿದೆ. ಆದರೆ ನಮ್ಮ ಪ್ರಧಾನಿ ರಾಜೀವ್ ಗಾಂಧಿ ಈ ಹಿಂದೇನೆ ಮಾಡಿ ಹೋಗಿದ್ದಾರೆ. ಹೀಗಿರೋವಾಗ ಬಿಜೆಪಿ ಈಗ ಹೊಸದೇನೂ ಮಾಡಲು ಹೊರಟಿದೆ ಅಂತಲೇ ಡಿಕೆಶಿ ಟೀಕಿಸಿದ್ದಾರೆ.

ಶಾಲಾ ಪಠ್ಯ ಕ್ರಮದಲ್ಲಿ ಭಗವದ್ಗೀತೆ ತರೋ ವಿಚಾರದ ಬಗ್ಗೆ ಈಗಾಗಲೇ ಸಿಎಂ ಬಸವರಾಜ್ ಬೊಮ್ಮಾಯಿ ಸಣ್ಣ ಸುಳಿವನ್ನೂ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಡಿಕೆಶಿ ಈಗ ಭಗವದ್ಗೀತೆಯ ಶ್ಲೋಕ ಹೇಳೋ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

22/03/2022 04:32 pm

Cinque Terre

47.74 K

Cinque Terre

4

ಸಂಬಂಧಿತ ಸುದ್ದಿ