ಹೈದರಾಬಾದ್: ದೇಶಕ್ಕೆ ಕಾಶ್ಮೀರದ ಫೈಲ್ಸ್ ಬೇಕಿಲ್ಲ, ಅಭಿವೃದ್ಧಿ ಫೈಲ್ಸ್ ಬೇಕು. ದೇಶದ ಸಮಸ್ಯೆಗಳನ್ನು ಗಮನ ಕೊಡದೆ ಜನರನ್ನು ದಾರಿತಪ್ಪಿಸುವ ಉದ್ದೇಶದಿಂದ ಸಿನಿಮಾ ಬಿಡುಗಡೆ ಮಾಡಲಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಆರೋಪಿಸಿದ್ದಾರೆ.
'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಕುರಿತು ಸೋಮವಾರ ಪ್ರತಿಕ್ರಿಯೆ ನೀಡಿದ ಅವರು, ಈ ಸಿನಿಮಾದಿಂದ ಯಾರಿಗೆ ಏನು ಪ್ರಯೋಜನವಿದೆ? ದೆಹಲಿಯಲ್ಲಿ ಮತ್ತು ಕಾಶ್ಮೀರದಲ್ಲಿರುವ ಪಂಡಿತರೇ ಗೊತ್ತಿದೆ. ಇದನ್ನೆಲ್ಲ ಕೆಲವರು ಕೇವಲ ಮತಕ್ಕಾಗಿ ಮಾಡುತ್ತಿದ್ದಾರೆ. ಇದರಿಂದ ತಮಗೆ ಯಾವುದೇ ಪ್ರಯೋಜನವಿಲ್ಲ ಎಂಬುದು ಅವರಿಗೂ ಗೊತ್ತಿದೆ" ಎಂದು ಹೇಳಿದ್ದಾರೆ.
ಕಾಶ್ಮೀರ ಫೈಲ್ಸ್ ಚಿತ್ರದ ಕಡೆಗೆ ಗಮನಕೊಡುವುದನ್ನ ಬಿಟ್ಟು, ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೇಂದ್ರ ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳುವತ್ತ ಗಮನಹರಿಸಬೇಕು. ಕಾಶ್ಮೀರದಲ್ಲಿ ಹಿಂದೂ ಪಂಡಿತರ ಹತ್ಯೆಯಾದಾಗ ಬಿಜೆಪಿ ಅಧಿಕಾರದಲ್ಲಿ ಇರಲಿಲ್ಲವೇ ಎಂದು ಕೆಸಿಆರ್ ಪ್ರಶ್ನಿಸಿದರು.
PublicNext
21/03/2022 08:35 pm