ರಾಜಸ್ಥಾನ: ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಭಾರಿ ಜಯಗಳಿಸಿದೆ. ಅಲ್ಲಿರೋ ಕಾಂಗ್ರೆಸ್ ಅನ್ನ ಧೂಳಿಪಟ ಮಾಡಿದೆ. ಆ ಗೆಲುವಿನ ಉತ್ಸಾಹದಲ್ಲಿರೋ ಆಮ್ ಆದ್ಮಿ ಪಕ್ಷ ಈಗ ರಾಜಸ್ಥಾನವನ್ನ ಗೆಲ್ಲಲು ಈಗಲೇ ತಯಾರಿ ನಡೆಸಿದೆ.
ಆಮ್ ಅದ್ಮಿ ಪಕ್ಷವನ್ನ ರಾಜಸ್ಥಾನದಲ್ಲಿ ಅಧಿಕಾರಕ್ಕೆ ತರಲೇಬೇಕು ಅನ್ನೋ ನಿಟ್ಟಿನಲ್ಲಿಯೇ ಆಮ್ ಆದ್ಮಿ ಪಕ್ಷ, ಈಗಲೇ ಸಿದ್ದತೆ ಆರಂಭಿಸಿದೆ.
ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ರಾಜಸ್ಥಾನದ ಇನ್ ಚಾರ್ಜ್ ಸಂಜಯ್ ಸಿಂಗ್ ಮಾರ್ಚ್-26 ರಂದು ರಾಜಸ್ಥಾನಕ್ಕೆ ಬರುತ್ತಿದ್ದಾರೆ. ಪಕ್ಷ ಸೇರ್ಪಡೆ ಅಭಿಯಾನವನ್ನ ಇಲ್ಲಿ ತೀವ್ರಗೊಳಿಸಲು ಕೂಡ ಪ್ಲಾನ್ ಮಾಡಿದ್ದಾರೆ. 2023 ರಲ್ಲಿ ನಡೆಯೋ ವಿಧಾನಸಭಾ ಚುನಾವಣೆಗೆ ಈಗಲೇ ಎಲ್ಲ ಸಿದ್ದತೆ ಆರಂಭಿಸಿದೆ.
PublicNext
21/03/2022 11:37 am