ಲಕ್ನೋ:ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಯಾರೆಲ್ಲ ಇರುತ್ತಾರೆ. ಯಾರಿಗೆ ಯೋಗಿ ಸಂಪುಟದಲ್ಲಿ ಸ್ಥಾನ ಸಿಗುತ್ತದೆ. ಈ ಎಲ್ಲ ಪ್ರಶ್ನೆಗಳು ಈಗ ಭಾರಿ ಕುತೂಹಲ ಮೂಡಿಸುತ್ತಲೇ ಇವೆ.
ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿಯೇ ಇಂದು ಸಮಾಲೋಚನೆ ನಡೆಯಲಿದೆ. ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಯಾರಿರಬೇಕು ಅನ್ನೋದನ್ನೇ ಈ ಸಮಾಲೋಚನೆಯಲ್ಲಿ ನಿರ್ಧರಿಸಲಾಗುತ್ತಿದೆ.
ವಿಧಾನ ಪರಿಷತ್ ಸದಸ್ಯರು, ಇತ್ತೀಚಿನ ಚುನಾವಣೆಯಲ್ಲಿ ಗೆದ್ದವರು, ಪ್ರಾದೇಶಿಕವಾರು ಪ್ರಾಬಲ್ಯ ಇರೋರು, ಜಾತಿ,ಸಮಾಜದ ವಿವಿಧ ವರ್ಗಳನ್ನು ಪ್ರತಿನಿಧಿಸೋವಂತಹ ವ್ಯಕ್ತಿಗಳನ್ನೇ ಆಯ್ಕೆ ಮಾಡಬೇಕು ಅನ್ನೋ ಚಿಂತನ-ಮಂಥನ ನಡೆದಿದೆ.
ಸ್ವತಂತ್ರ ದೇವ್ ಸಿಂಗ್, ಶ್ರೀಕಾಂತ್ ಶರ್ಮಾ, ಬೃಜೇಶ್ ಪಾಠಕ್, ಕುನ್ವರ್ ಬ್ರಿಜೇಶ್ ಸಿಂಗ್, ಅದಿತಿ ಸಿಂಗ್, ಆಸಿಮ್ ಅರುಣ್, ರಾಜೇಶ್ವರ್ ಸಿಂಗ್, ಯೋಗಿ ಸಂಪುಟದಲ್ಲಿ ಸ್ಥಾನ ಪಡೆಯೋ ಚಾನ್ಸಸ್ ಇದೆ.
PublicNext
21/03/2022 09:47 am