ನವದೆಹಲಿ: ಭಾರತವು ಶೀಘ್ರದಲ್ಲೇ ದ್ವೇಷ ಮತ್ತು ಕೋಪದ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ವರ್ಲ್ಡ್ ಹ್ಯಾಪಿನೆಸ್ ವರದಿಯನ್ನು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಭಾರತವು ಹಸಿವಿನಲ್ಲಿ 10 ಸ್ಥಾನ, ಸ್ವಾತಂತ್ರ್ಯದಲ್ಲಿ 119ನೇ ಸ್ಥಾನ, ಸಂತೋಷದಲ್ಲಿ 136ನೇ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಕೋಪ ಮತ್ತು ದ್ವೇಷದಲ್ಲಿ ಶೀಘ್ರವೇ ಅಗ್ರಸ್ಥಾನವನ್ನು ಪಡೆಯಲಿದ್ದೇವೆ" ಎಂದು ಹೇಳಿದ್ದಾರೆ.
ಈ ವರ್ಷದ ವರ್ಲ್ಡ್ ಹ್ಯಾಪಿನೆಸ್ ವರದಿಯಲ್ಲಿ ಫಿನ್‍ಲ್ಯಾಂಡ್ ಅಗ್ರಸ್ಥಾನದಲ್ಲಿದೆ. ಡೆನ್ಮಾರ್ಕ್, ಐಸ್ಲ್ಯಾಂಡ್, ಸ್ವಿಟ್ಜಲೆರ್ಂಡ್, ನೆದಲ್ಯಾರ್ಂಡ್ಸ್, ಲಕ್ಸೆಂಬರ್ಗ್, ಸ್ವೀಡನ್, ನಾರ್ವೆ, ಇಸ್ರೇಲ್ ಮತ್ತು ನ್ಯೂಜಿಲೆಂಡ್ ರಾಷ್ಟ್ರಗಳು ಕ್ರಮಾಂಕವಾಗಿ ಎರಡರಿಂದ ಹತ್ತನೇ ಸ್ಥಾನದಲ್ಲಿದೆ. ಭಾರತವು ಹಿಂದಿನ ಬಾರಿಗಿಂತ ಈ ಬಾರಿ ಮೂರು ಸ್ಥಾನಗಳು ಏರಿಕೆಯಾಗಿದ್ದು, 136ನೇ ಸ್ಥಾನವನ್ನು ಪಡೆದಿದೆ. ಕಳೆದ ವರ್ಷ ಈ ಪಟ್ಟಿಯಲ್ಲಿ 139ನೇ ಸ್ಥಾನವನ್ನು ಪಡೆದಿತ್ತು.
PublicNext
20/03/2022 08:57 am