ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದಲ್ಲಿ ಮುಂದಿನ 5 ವರ್ಷಗಳಲ್ಲಿ ಜಪಾನ್‌ನಿಂದ 3.2 ಲಕ್ಷ ಕೋಟಿ ರೂ. ಹೂಡಿಕೆ: ಪ್ರಧಾನಿ ಮೋದಿ

ನವದೆಹಲಿ: ಭಾರತದಲ್ಲಿ ಮುಂದಿನ 5 ವರ್ಷಗಳಲ್ಲಿ ಜಪಾನ್‌ ದೇಶವು ಐದು ಟ್ರಿಲಿಯನ್ ಯೆನ್ (3.2 ಲಕ್ಷ ಕೋಟಿ ರೂ.) ಹೂಡಿಕೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತ-ಜಪಾನ್ ಆರ್ಥಿಕ ಶೃಂಗಸಭೆ ಇಂದಿನಿಂದ ಆರಂಭವಾಗಿದೆ. ಸಭೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಪ್ರಗತಿ, ಸೌಹಾರ್ದತೆ ಮತ್ತು ಪಾಲುದಾರಿಕೆ ಭಾರತ- ಜಪಾನ್ ಸಂಬಂಧದ ಮೂಲ. ಜಪಾನ್ ದೇಶದಲ್ಲಿ ದೊಡ್ಡ ಹೂಡಿಕೆಯ ರಾಷ್ಟ್ರಗಳಲ್ಲಿ ಒಂದಾಗಿದ್ದು, ಮುಂಬೈ- ಅಹಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್ ನಲ್ಲಿ ಒನ್ ಟೀಮ್- ಒನ್ ಪ್ರಾಜೆಕ್ಟ್ ರೀತಿಯಲ್ಲಿ ಭಾರತ- ಜಪಾನ್ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು.

ಭಾರತದೊಂದಿಗೆ ಸೇರಿ ಉಕ್ರೇನ್‌ನಲ್ಲಿ ಯುದ್ಧ ಕೊನೆಗಾಣಿಸಿ, ಉಕ್ರೇನ್ ಮತ್ತು ಅದರ ನೆರೆಯ ರಾಷ್ಟ್ರಗಳಿಗೆ ನೆರವು ನೀಡಲು ಪ್ರಯತ್ನಿಸುತ್ತಿದ್ದೇವೆ. ಇಂಡೋ- ಫೆಸಿಪಿಕ್ ಪ್ರದೇಶದಲ್ಲಿ ಮುಕ್ತತೆಗಾಗಿ ಉಭಯ ದೇಶಗಳು ಪ್ರಯತ್ನವನ್ನು ಹೆಚ್ಚಿಸಬೇಕಾಗಿದೆ ಎಂದು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಹೇಳಿದರು.

Edited By : Vijay Kumar
PublicNext

PublicNext

19/03/2022 09:38 pm

Cinque Terre

114.25 K

Cinque Terre

12