ಬೆಂಗಳೂರು: ವಿಧಾನಸಭೆಯಲ್ಲಿನ ಸಚಿವರ ವಿಶ್ರಾಂತಿ ಕೊಠಡಿಯಲ್ಲಿ ಖಾತೆಗಾಗಿ ಹಾಗೂ ಇತರ ಕಾರಣಗಳಿಗಾಗಿ ಇಬ್ಬರು ಸಚಿವರ ನಡುವೆ ಮಾತಿನ ಚಕಮಕಿ ನಡೆದಿದೆ. ಬೆಂಗಳೂರು ನಗರ ಉಸ್ತುವಾರಿಗಾಗಿ ಈ ಜಗಳ ನಡೆದಿದೆ ಎಂಬ ಮಾಹಿತಿ ಇದೆ. ಆರ್.ಅಶೋಕ್ ಹಾಗೂ ಅಶ್ವಥ್ ನಾರಾಯಣ್ ನಡುವಿನ ಈ ಜಗಳ ಕಂಡು ಇತರ ಸಚಿವರು ಹಾಗೂ ಶಾಸಕರು ಶಾಕ್ ಆಗಿದ್ದಾರೆ.
ಈ ವಿಷಯಕ್ಕಾಗಿ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗಲೂ ಜಗಳ ಇತ್ತು ಎನ್ನಲಾಗಿದೆ. ರಾಮನಗರ ಜಿಲ್ಲೆಯ ತಹಶೀಲ್ದಾರ್ ವರ್ಗಾವಣೆಗೆ ಸಂಬಂಧಪಟ್ಟಂತೆ ಸಚಿವರಿಬ್ಬರ ನಡುವೆ ಮನಸ್ತಾಪ ಇತ್ತು ಎನ್ನಲಾಗಿದೆ. ಜಿಲ್ಲೆಯ ತಹಶೀಲ್ದಾರರೊಬ್ಬರ ವರ್ಗಾವಣೆ ಮಾಡಲು ಅಶ್ವಥ್ ನಾರಾಯಣ್ ಬಿಗಿಪಟ್ಟು ಹಿಡಿದಿದ್ದಾರೆ. ಆದರೆ ತಹಶೀಲ್ದಾರ್ ವರ್ಗಾವಣೆ ಮಾಡದೇ ಅಶೋಕ್ ಇನ್ನೊಂದು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಮೂರು ಬಾರಿ ಹೇಳಿದ್ರೂ ತಹಶೀಲ್ದಾರ್ ವರ್ಗಾವಣೆ ಮಾಡಿಲ್ಲ ಎಂದು ಅಶ್ವಥ್ ನಾರಾಯಣ್ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಇವರಿಬ್ಬರ ಜಗಳಕ್ಕೆ ಇದೇ ಕಾರಣ ಎಂಬ ಮಾಹಿತಿ ಇದೆ.
PublicNext
18/03/2022 05:39 pm