ನವದೆಹಲಿ: ಉತ್ತರ ಪ್ರದೇಶದಲ್ಲಿ ಹೊಸ ಸಚಿವ ಸಂಪುಟ ರಚನೆ ತಯಾರಿ ಜೋರ್ ಆಗಿದೆ.ಈ ಹಿನ್ನೆಲೆಯಲ್ಲಿ
ದೆಹಲಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ಕೂಡ ಇಲ್ಲಿ ನಡೆದಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಭಾರಿ ಜಯಭೇರಿ ಬಾರಿಸಿದೆ. ಈ ಹಿನ್ನೆಲೆಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್,ಯುಪಿ ಹಂಗಾಮಿ ಸಿಎಂ ಯೋಗಿ ಆದಿತ್ಯನಾಥ್ ಹೀಗೆ ಪ್ರಮುಖರೆಲ್ಲ ಇದ್ದರು.
ಉತ್ತರ ಪ್ರದೇಶದ ವಿಧಾನ ಪರಿಷತ್ ಗೆ 36 ಅಭ್ಯರ್ಥಿಗಳ ಹೆಸರನ್ನೂ ಇಲ್ಲಿ ಚರ್ಚಿಸಲಾಗಿದೆ. ಪ್ರಮಾಣ ವಚನದ ದಿನದ ಬಗ್ಗೆನೂ ಚರ್ಚೆ ನಡೆದಿದೆ.ಆಹ್ವಾನಿತರ ಕುರಿತು ಇಲ್ಲಿ ಚರ್ಚೆ ಆಗಿದೆ. ಹೋಳಿ ಹಬ್ಬದ ಬಳಿಕವೇ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಅನ್ನೋ ಮಾಹಿತಿ ಈಗ ಮೂಲಗಳಿಂದ ತಿಳಿದು ಬಂದಿದೆ.
PublicNext
17/03/2022 04:57 pm