ನವದೆಹಲಿ: ಗೋವಾ ರಾಜ್ಯದ ಹಂಗಾಮಿ ಸಿಎಂ ಪ್ರಮೋದ್ ಸಾವಂತ್ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನ ದೆಹಲಿಯ ಸಂಸತ್ ಭವನದ ಕಚೇರಿಯಲ್ಲಿ ಭೇಟಿಯಾಗಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಬರೋಬ್ಬರಿ ಬಿಜೆಪಿ 20 ಸ್ಥಾನಗಳನ್ನ ಗೆದ್ದುಕೊಂಡು ಈಗ ಸರ್ಕಾರ ರಚನೆಗೆ ಮುಂದಾಗಿದೆ. ಇದೇ ಸಮಯದಲ್ಲಿಯೇ ಪ್ರಮೋದ್ ಸಾವಂತ್ ಮೋದಿ ಅವರನ್ನ ಭೇಟಿ ಆಗಿದ್ದಾರೆ.
ನಮ್ಮ ಪಕ್ಷವನ್ನ ಬೆಂಬಲಿಸಿದ ಗೋವಾ ಜನತೆಗೆ ಮೋದಿ ಧನ್ಯವಾದ ತಿಳಿಸಿದ್ದಾರೆ.ಗೋವಾದ ಜನತೆಗಾಗಿ, ರಾಜ್ಯದ ಅಭಿವೃದ್ಧಿಗಾಗಿಯೇ ಒಟ್ಟಿಗೆ ಕೆಲಸ ಮಾಡೋಣ ಅಂತಲೂ ಮೋದಿ ಹೇಳಿದ್ದಾರೆ.
PublicNext
16/03/2022 05:36 pm