ಚಂಡೀಗಢ: ಪಂಜಾಬ್ ಮುಂದಿನ ಸಿಎಂ ಆಮ್ ಆದ್ಮಿ ಪಕ್ಷದ ಭಗವಂತ್ ಮಾನ್ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬರೋಬ್ಬರಿ 40 ಎಕರೆ ಗೋಧಿ ಬೆಳೆಯನ್ನ ನಾಶಮಾಡಲಾಗುತ್ತಿದೆ.
ಹೌದು. ಭಗವಂತ್ ಮಾನ್ ನಾಳೆ ಅಂದ್ರೆ ಮಾರ್ಚ್-16 ರಂದು ಸಿಎಂ ಆಗಿ ಪ್ರಮಾನ ವಚನ ಸ್ವೀಕರಿಸುತ್ತಿದ್ದಾರೆ. ಈ ಒಂದು ಕಾರ್ಯಕ್ರಮ ರಾಜಭವನದಲ್ಲಿ ನಡೆಯದೇ,ಭಗವಂತ್ ಮಾನ್ ಅವರ ಊರು ಖತ್ಕರ್ ಕಲಾನ್ ನಲ್ಲಿಯೆ ನಡೆಯುತ್ತಿದೆ.
ಈ ಒಂದು ಕಾರ್ಯಕ್ರಮಕ್ಕಾಗಿಯೇ ಬರೋಬ್ಬರಿ 40 ಎಕರೆ ಗೋಧಿ ಬೆಳೆಯನ್ನ ನಾಶ ಮಾಡಲಾಗಿದೆ.
ಪ್ರತಿ ಎಕರೆಗೆ 46 ಸಾವಿರ ರೂಪಾಯಿಯನ್ನೂ ಪರಿಹಾರ ರೂಪದಲ್ಲಿ ರೈತರಿಗೆ ಕೊಡುತ್ತಾರೆ ಅಂತಲೂ ಹೇಳಲಾಗುತ್ತಿದೆ.
ಸರ್ಕಾರದ ಬೊಕ್ಕಸದಿಂದಲೇ 2.61 ಕೋಟಿ ರೂಪಾಯಿಯನ್ನೂ ಖರ್ಚು ಮಾಡಲಾಗುತ್ತಿದೆ.
PublicNext
15/03/2022 05:36 pm