ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೋಲಿಂದ 'ಕೈ'ಯಲ್ಲಿ ಶುರುವಾಯ್ತು ವಾಕ್ಸಮರ- ರಾಹುಲ್‌ ವಿರುದ್ಧ ಕಪಿಲ್‌ ಸಿಬಲ್ ಸಿಡಿಮಿಡಿ

ನವದೆಹಲಿ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಕಾಂಗ್ರೆಸ್ ಒಳಗೆ ಕಿತ್ತಾಟ ಮತ್ತಷ್ಟು ತೀವ್ರಗೊಂಡಿದೆ. ಸದ್ಯ ಕಾಂಗ್ರೆಸ್‌ನ ಹಿರಿಯ ನಾಯಕ, ವಕೀಲ ಕಪಿಲ್ ಸಿಬಲ್ ಅವರು ರಾಹುಲ್ ಗಾಂಧಿ ಹಾಗೂ ಅವರ ಕುಟುಂಬದ ವಿರುದ್ಧ ಕಿಡಿಕಾರಿದ್ದಾರೆ.

'ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಪಿಲ್ ಸಿಬಲ್, "ಗಾಂಧಿ ಕುಟುಂಬ ನಾಯಕತ್ವ ಸ್ಥಾನಗಳಿಂದ ದೂರ ಸರಿದು ಬೇರೆಯವರಿಗೆ ಅವಕಾಶ ನೀಡುವ ಸಮಯ ಹತ್ತಿರ ಬಂದಿದೆ. ಗಾಂಧಿಗಳು ಸ್ವಯಂಪ್ರೇರಣೆಯಿಂದ ನಾಯಕತ್ವದಿಂದ ದೂರ ಸರಿಯಬೇಕು. ಸೋನಿಯಾ ಗಾಂಧಿ ನೆಪ ಮಾತ್ರಕ್ಕೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ವಾಸ್ತವವಾಗಿ ರಾಹುಲ್ ಗಾಂಧಿ ಅವರೇ ನಿಜವಾದ ಅಧ್ಯಕ್ಷ. ರಾಹುಲ್ ಗಾಂಧಿಯೇ ಪಕ್ಷದ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ" ಎಂದಿದ್ದಾರೆ.

Edited By : Vijay Kumar
PublicNext

PublicNext

15/03/2022 04:36 pm

Cinque Terre

31.84 K

Cinque Terre

5

ಸಂಬಂಧಿತ ಸುದ್ದಿ