ಬೆಂಗಳೂರು: ತಮ್ಮ ವಿರುದ್ಧ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು ಮಾಡಿರುವ ರಾಸಲೀಲೆ ಆರೋಪಕ್ಕೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಸಿ.ಪಿ. ಯೋಗೇಶ್ವರ್ ಯುಬಿ ಸಿಟಿ ಪಕ್ಕದಲ್ಲೇ ಇದ್ದರಲ್ಲಾ ಆಗ ಏನು ಮಜಾ ಮಾಡುತ್ತಿದ್ದರು? ನನ್ನ ಜೀವನ ತೆರೆದ ಪುಸ್ತಕ. ನನಗೆ ಯಾರ ಪ್ರಮಾಣಪತ್ರವೂ ಬೇಡ. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಾನು ರಾಸಲೀಲೆ ನಡೆಸಲು ವೆಸ್ಟೆಂಡ್ ಹೋಟೆಲ್‌ಗೆ ಹೋಗುತ್ತಿರಲಿಲ್ಲ. ಸರ್ಕಾರಿ ಬಂಗಲೆ ಇಲ್ಲದ ಕಾರಣದಿಂದ ಸ್ವಲ್ಪ ಸಮಯ ವಿಶ್ರಾಂತಿಗಾಗಿ ಅಲ್ಲಿಗೆ ಹೋಗುತ್ತಿದ್ದೆ. ನಾನು ಎಲ್ಲೇ ಹೋದರೂ ಆಪ್ತ ಸಹಾಯಕ ನನ್ನ ಜತೆಯಲ್ಲೇ ಇರುತ್ತಿದ್ದರು. ಈಗಲೂ ಜತೆಯಲ್ಲೇ ಇರುತ್ತಾರೆ. ಆಗ ನನ್ನ ಸಂಪುಟ ಸಹೋದ್ಯೋಗಿಯಾಗಿದ್ದ ಸಾ.ರಾ.ಮಹೇಶ್ ಕೂಡ ಜೊತೆಯಲ್ಲೇ ಇರುತ್ತಿದ್ದರು. ಇನ್ನೂ ಅನೇಕ ಸ್ನೇಹಿತರು ನನ್ನೊಂದಿಗೆ ಇರುತ್ತಿದ್ದರು' ಎಂದು ಹೇಳಿದರು.
‘ಈ ವ್ಯಕ್ತಿಯನ್ನು ನೋಡಿ ನಾನು ಕಲಿಯಬೇಕಾ? ಇವರೇನು ಗುಡಿಸಲಿನಲ್ಲಿ ಇದ್ದರಾ? ನನ್ನ ಜೀವನದಲ್ಲಿ ಕದ್ದುಮುಚ್ಚಿ ಯಾವ ಸಂಗತಿಗಳೂ ಇಲ್ಲ. ನನ್ನ ಬಗ್ಗೆ ಟೀಕಿಸುವಾಗ ಆತ ಬಳಸಿರುವ ಪದಪುಂಜಗಳೇ ಅವರ ಸಂಸ್ಕಾರವನ್ನು ಹೇಳುತ್ತವೆ’ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
PublicNext
14/03/2022 08:19 pm