ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗೆ ಉಚಿತ ಬಸ್ ಪಾಸ್'

ಗದಗ: ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುತ್ತೇವೆ ಎಂದು ಸಾರಿಗೆ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕೆಎಸ್​ಆರ್​ಟಿಸಿ ಯಾವುದೇ ಆಸ್ತಿ ಅಡಮಾನವಾಗಿ ಇಟ್ಟಿಲ್ಲ. ಬೆಂಗಳೂರು ಶಾಂತಿ ನಗರ ಕಾಂಪ್ಲೆಕ್ಸ್ ಅಡಮಾನ‌ ಇಡಲಾಗಿದೆ. ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಕಡೆ 16 ಎಕರೆ ಅಡಮಾನ ಇಡಲಾಗಿದೆ. ಕಲ್ಯಾಣ ಕರ್ನಾಟಕದಲ್ಲೂ ಕೆಲವು ಜಮೀನು ಅಡಮಾನ ಇಡಲಾಗಿದೆ. ಸಂಸ್ಥೆ ಜಾಗ ಅಡಮಾನ ಇಟ್ಟ ಹಣ ಸಿಬ್ಬಂದಿ ಭವಿಷ್ಯ ನಿಧಿಗೆ ನೀಡಲಾಗಿದೆ. ಕಡಿಮೆ ದರದಲ್ಲಿ ಬಡ್ಡಿ ಇದ್ದ ಕಾರಣ ಆಸ್ತಿ ಅಡಮಾನ ಇಡಲಾಗಿದೆ. ಇನ್ನೂ ಒಂದೂವರೆ ತಿಂಗಳ ಸಂಬಳ ಮಾತ್ರ ಬಾಕಿ ಇದೆ. ಒಂದು ವಾರದೊಳಗೆ ಆ ಬಾಕಿ ಸಂಬಳ ನೀಡಿದರೆ ಕ್ಲಿಯರ್ ಆಗುತ್ತೆ ಅಂತ ಸಚಿವರು ತಿಳಿಸಿದರು.

Edited By : Shivu K
PublicNext

PublicNext

13/03/2022 03:55 pm

Cinque Terre

95.68 K

Cinque Terre

37

ಸಂಬಂಧಿತ ಸುದ್ದಿ