ವರದಿ: ಮೌನೇಶ ಬಿ. ಮಂಗಿಹಾಳ, 'ಪಬ್ಲಿಕ್ ನೆಕ್ಸ್ಟ್' ಯಾದಗಿರಿ
ಯಾದಗಿರಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಇಂದು ಯಾದಗಿರಿ ಜಿಲ್ಲೆಗೆ ಆಗಮಿಸಿ ತಾಪಂ ಕಾರ್ಯಾಲಯದ ನೂತನ ಕಟ್ಟಡವನ್ನು ಉದ್ಘಾಟಿಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
'ಬಿಜೆಪಿಯವ್ರು ಮಧ್ಯಂತರ ಚುನಾವಣೆಗೆ ಬರಲ್ಲ' ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಅವರು, "ಕಾಂಗ್ರೆಸ್ ನವರು ತಾಕತ್ತಿಲ್ಲದೆ ಮಾತಾಡ್ತಾ ಇದ್ದಾರೆ. ತಾಕತ್ತಿದೆ, ತಾಕತ್ತಿದೆ ಅಂತಾ 28 ಲೋಕಸಭೆ ಕ್ಷೇತ್ರಗಳಲ್ಲಿ ಒಂದೇ ಗೆದ್ದಿರೋದು. ತಾಕತ್ತಿರೋ ಕಾಂಗ್ರೆಸ್ ನ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ್ರು ಅಂತಾ ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಇನ್ನು ತಾಕತ್ತಿರೋ ಕಾಂಗ್ರೆಸ್ ಉಪ ಚುನಾವಣೆಗಳಲ್ಲಿ ನೆಗೆದು ಬಿದ್ದು ಹೋಯ್ತು. ಮೂರು ಕಾರ್ಪೊರೇಷನ್ ಚುನಾವಣೆ ಸೋತಿದ್ದಾರೆ. ಅಲ್ಲದೆ, ನಾವು ಗ್ರಾಪಂ ಚುನಾವಣೆಯಲ್ಲಿ ಗೆದ್ದಿದ್ದು, ಕಾಂಗ್ರೆಸ್ ನ್ನ ಸೋಲಿಸುವ ದೊಡ್ಡ ಪಡೆಯೇ ಬಿಜೆಪಿಯಲ್ಲಿದೆ.
ಪಂಚರಾಜ್ಯಗಳಲ್ಲಿ ಯಾವ ರೀತಿಯವು ಸೋತಿದ್ದಾರೆ, ಅದೇ ರೀತಿ ಕರ್ನಾಟಕದಲ್ಲೂ ಸೋಲಿಸಿ ನಮ್ಮ ತಾಕತ್ತು ತೋರಿಸುತ್ತೇವೆ" ಎಂದರು.
PublicNext
12/03/2022 09:01 pm