ಉತ್ತರ ಪ್ರದೇಶ: ಯೋಗಿ ಆದಿತ್ಯನಾಥ್ ಮಾತು ನಿಜಕ್ಕೂ ಕ್ರಾಂತಿಕಾರಿನೆ ಬಿಡಿ. ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ವೇಳೆ ನಡೆದ ಪ್ರಚಾರದಲ್ಲಿ ಪ್ರತಿಪಕ್ಷವನ್ನ ನೇರಾ ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಮಾರ್ಚ್-10 ನಂತರ ನಿಮ್ಮ ಆರ್ಭಟ ಕಡಿಮೆ ಆಗುತ್ತದೆ ಅಂತಲೂ ಆಗಲೇ ಗೆಲುವಿನ ನಗೆ ಬೀರಿದ್ದಾರೆ.
ಪ್ರಧಾನಿ ಮೋದಿ ಸಂಗಡ ಇದ್ದರೇ ಇಂತಹದ್ದೇ ಮಾತುಗಳು ಕೇಳಲು ಸಾಧ್ಯ. ಹೌದು. ಯೋಗಿ ಆದಿತ್ಯನಾಥ್ ಭಾರಿ ವಿಶ್ವಾದ ಮಾತುಗಳನ್ನೆ ಆಡಿದ್ದಾರೆ. ಮಾರ್ಚ್-10 ರ ಬಳಿಕ ಮತ್ತೆ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ನಿಮ್ಮ ಆರ್ಭಟ ಶಾಂತವಾಗುತ್ತದೆ ಅಂತಲೇ ಆಗಲೇ ಹೇಳಿಕೆ ಕೊಟ್ಟಿದ್ದಾರೆ.
ನಮ್ಮ ಸರ್ಕಾರದಲ್ಲಿ ಯಾರೂ ದುಸ್ಸಾಹ ಮಾಡಲು ಸಾಧ್ಯವಿಲ್ಲ. ಹೆಣ್ಣುಮಕ್ಕಳನ್ನ ಕೆಟ್ಟ ದೃಷ್ಟಿಯಿಂದ ನೋಡಿದರೇ ಮುಗಿತು. ಅವರಿಗೆ ದುರ್ಯೋಧನ ಮತ್ತು ದುಶ್ಯಾಸನನ ಸ್ಥಿತಿ ಬರುತ್ತದೆ ಅಂತಲೇ ಹೇಳಿದ್ದರು.
ಬಹಿರಂಗ ಸಭೆಯಲ್ಲಿ ಯೋಗಿ ತೀಕ್ಷ್ಣವಾಗಿಯೇ ವಾಗ್ದಾಳಿ ಮಾಡಿದ್ದಾರೆ. ಅಂದಿನ ಆ ಮಾತು ಇಂದಿನ ಈ ಗೆಲುವು ಎರಡೂ ಯೋಗಿಯ ಕ್ರಾಂತಿಕಾರಿ ಮಾತಿನ ಬಗ್ಗೆ ಮತ್ತಷ್ಟು ಇನ್ನಷ್ಟು ವಿಶ್ವಾಸ ಮಾಡಿಸಿವೆ.
PublicNext
12/03/2022 01:16 pm