ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನ ಸಿಎಂ ಇಬ್ರಾಹಿಂ ತೊರೆಯಲು ಗಟ್ಟಿ ನಿರ್ಧಾರ ಮಾಡಿದ್ದಾರೆ.ಪಕ್ಷದಲ್ಲಿಯೇ ಇಬ್ರಾಹಿಂ ಅವರನ್ನ ಉಳಿಸಿಕೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಸ್ ಈಗ ವಿಫಲವಾಗಿದೆ.
ಸಿಎಂ ಇಬ್ರಾಹಿಂ ಅವರನ್ನ ಪಕ್ಷದಲ್ಲಿಯೆ ಉಳಿಸಿಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದರು. ಇಬ್ರಾಹಿಂ ನನ್ನ ಸ್ನೇಹಿತ. ಆತ ಪಕ್ಷ ಬಿಡೋದಿಲ್ಲ. ಅತೀ ಶೀಘ್ರದಲ್ಲಿಯೇ ಅವರ ಮನೆಗೆ ಬಿರಿಯಾನಿ ಸವಿಯಲು ಹೋಗುತ್ತೇನೆ ಅಂತಲೂ ಸಿದ್ದರಾಮಯ್ಯ ಹೇಳಿದರು. ಆದರೆ ಅದೆಲ್ಲವೂ ಈಗ ಸುಳ್ಳಾಗಿದೆ.
ಶನಿವಾರ ಅಂದ್ರೆ ಇಂದು ಸಿಎಂ ಇಬ್ರಾಹಿಂ ರಾಜೀನಾಮೆ ನೀಡುತ್ತಿದ್ದಾರೆ.ಕೆಪಿಸಿಸಿ ಕಚೇರಿಗೆ ರಾಜೀನಾಮೆ ಪತ್ರ ನೀಡಿ ಅಧಿಕೃತವಾಗಿಯೇ ಪಕ್ಷ ತೊರೆಯಲಿದ್ದಾರೆ. ಸಭಾಪತಿ ಬಸವರಾಜ್ ಹೊರಟ್ಟಿ ಅವರನ್ನ ಭೇಟಿಯಾಗಿ ಪರಿಷತ್ ಸ್ಥಾನಕ್ಕೂ ರಾಜೀನಾಮೆ ಕೊಡೋ ಸಾಧ್ಯತೆನೂ ಇದೆ.
PublicNext
12/03/2022 09:08 am